
ತಾಳ್ಮೆ, ಸಹನೆಗೆ ಉದಾಹರಣೆ ನಮ್ಮ ಬೆಂಗಳೂರು ತಂಡ ಈ ಸಲಾನು ಕಪ್ ನಮ್ದೆ
ಬೈಲಹೊಂಗಲ : ಸಹನೆ ಮತ್ತು ತಾಳ್ಮೆ ಮತ್ತು ಸಾಧನೆ ಜೊತೆ ಜೊತೆಯಾಗಿ ಇರುವದನ್ನು ಸಾಭಿತು ಮಾಡಿದ ರಾಯಲ್ ಚಾಲೆಂಚರ್ಸ್ ಬೆಂಗಳೂರು ತಂಡ ಸತತ ಎರಡು ಕಪ್ ಗೆದ್ದು ತೋರಿಸಿದೆ.

ಸನ್ 2008 ರ ಫೈನಲ್ ಪ್ರವೇಸ ಮಾಡಿದ್ರೂ ಕೂಡಾ ಕಪ್ ಗೆಲ್ಲಲಾಗಲಿಲ್ಲ ಆದ್ರೂ ಸಹ ತನ್ನ ಪ್ರಯತ್ನ ಬಿಡಲಿಲ್ಲ. 17 ವರ್ಷಗಳ ಕಾಲ ನಿರಂತರವಾಗಿ ಒಂದು ಕಪ್ಪು ಗೆಲ್ಲುವ ತವಕ ಮನದಲ್ಲಿ ಮಾಡಿಕೊಂಡು ವರ್ಷದಿಂದ ವರ್ಷಕ್ಕೆ ಹೊಸ ಉಲ್ಲಾಸದಿಂದ ಆಟವಾಡಿ ಕೊನೆಗೆ 2025 ರಲ್ಲಿ ತನ್ನ ಪ್ರಥಮ ಟ್ರೋಪಿ ಗೆಲ್ಲುತ್ತೆ. ಇತರ ತಂಡಗಳಿಗೆ ಹೋಲಿಸಿದರೆ ಅತೀ ಹೆಚ್ಚಿನ ಫ್ಯಾನ್ ಬೇಸ್ ಹೊಂದಿರುವ ಏಕೈಕ ತಂಡ ನಮ್ಮ ಬೆಂಗಳೂರು ತಂಡ.

ಮನೆಯ ಮಹಾಲಕ್ಷ್ಮಿಯರು ಬೆಂಗಳೂರಿನ ಮಹಿಳಾ ತಂಡ ಮೊದಲು ಕಪ್ ಗೆದ್ದು ಸಂಭ್ರಮಿಸಿದರೆ ನಂತರ ಪುರುಷ ಐಪಿಲ್ ತಂಡ ಸಾಧನೆ ತೋರಿ ತನ್ನ ಸಾಮರ್ಥ್ಯ ಸಾಭಿತು ಪಡಿಸಿದೆ. ಮಹಾಲಕ್ಷ್ಮಿಯರು ಎರಡು ಕಪ್ ಗೆದ್ದು ಬೀಗಿದರೆ, ಪುರುಷ ತಂಡ ಕೂಡಾ ಸತತ ಎರಡು ಸಲ ವಿಜೇತರಾಗಿ ಹೊರಹೊಮ್ಮಿ ಬೆಂಗಳೂರು, ಕರ್ನಾಟಕದ ತಂಡ ಏನು ಎಂಬುವದನ್ನು ಜಗತ್ತಿಗೆ ತೋರಿಸಿದೆ. ಬೇರೆ ಫ್ರ್ಯಾಂಚೈಸ್ ನ ತಂಡಗಳ ಬಳಿ 5 ಕಪ್ಪುಗಳು ಇದ್ದರೂ ಸಹ ರಾಯಲ್ ಚಾಲೆಂಜರ್ಸ್ ಬಳಿ ಈಗ 4 ಕಪ್ ಇವೆ.
ಮುಂದಿನ ಸಲವೂ ಕೂಡಾ ಬೆಂಗಳೂರಿನ ಮಹಿಳಾ ಹಾಗೂ ಪುರುಷ ತಂಡಗಳು ಕಪ್ ಗೆಲ್ಲುವ ಮೂಲಕ 6 ಕಪ್ ಗಳನ್ಮು ತಮ್ಮದಾಗಿಸಿಕೊಳ್ಳಲಿ ಎನ್ನುವದು ಕ್ರಿಕೆಟ್, ರಾಜ್ಯದ ಅಭಿಮಾನಿಗಳ ಆಶಯ.
ವರದಿಗಾರ : ರವಿಕಿರಣ್ ಯಾತಗೇರಿ










