ಪಾದಯಾತ್ರೆ ಮೂಲಕ ಶಬರಿಮಲೆ ಯಾತ್ರೆ ಹೊರಟ ಹಲ್ಯಾಳ ಗ್ರಾಮದ ಯುವಕ
- 15 Jan 2024 , 3:26 AM
- Bengaluru
- 336
ಅಥಣಿ : ತಾಲೂಕಿನ ಹಲ್ಯಾಳ ಗ್ರಾಮದ ಗುಂಡು ರಾಚಪ್ಪ ವಾಡೆದ ಎಂಬ ಯುವಕನು ಸತತ ಎಂಟನೇ ಬಾರಿ ಕಾಲ್ನಡಿಗೆ ಮುಖಾಂತರ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಮಾಡುತ್ತಿರುವುದು ಒಂದು ವಿಶೇಷವಾಗಿದೆ
ಇಂದು ಪಾದಯಾತ್ರೆ ಹೊರಟು ಸುಮಾರು 21 ದಿನಗಳ ಕಾಲ ರಾಜ್ಯ ಹೆದ್ದಾರಿಗಳ ಮೂಲಕ ಶಬರಿಮಲೆ ಶ್ರೀ ಸ್ವಾಮಿ ಅಯ್ಯಪ್ಪನ ದರ್ಶನ ಪಡೆದುಕೊಂಡು ಮರಳಿ ಸ್ವಗ್ರಾಮಕ್ಕೆ ಆಗಮಿಸುವರು

ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ್ ಪಡಸಲಗಿ ಗುರುಗಳು. ಮಹೇಶ್ ಕಾಂಬಳೆ. ಶಶಿಕಾಂತ್ ದಳವಾಯಿ. ಕುಶಾಲ್ ಕಾಂಬಳೆ. ಶಂಕರ್ ಬೂಸನಾಯಕ. ಹನುಮಂತ ನಾಯಕ ಹಾಗೂ ಸಮಸ್ತ ಹಲ್ಯಾಳ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.











