ರಕ್ತದೊತ್ತಡದಿಂದ ಪ್ರಜ್ಞೆತಪ್ಪಿದ ವ್ಯಕ್ತಿಯ ಸಹಾಯಕ್ಕೆ ನಿಂತ ಸಾಮಾಜಿಕ ಕಾರ್ಯಕರ್ತ ವಿಜಯ್ ಮೋರೆ

ಬೆಳಗಾವಿ :ಪಿರನವಾಡಿ ಕೈಗಾರಿಕಾ ಪ್ರದೇಶದ ಬಳಿ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.  ಆ ವ್ಯಕ್ತಿಗೆ ಸಹಾಯ ಮಾಡಲು ಯಾರೂ ಮುಂದಾಗಲಿಲ್ಲ.  ಈ ಸಮಯದಲ್ಲಿ ಸಾಮಾಜ ಸೇವಕ ಅಲನ್ ವಿಜಯ್ ಮೋರೆ  ಮತ್ತು ಅವರ  ಸ್ನೇಹಿತ ಸ್ಯಾಮ್ಯುಯೆಲ್ ರೋಡ್ರಿಗಸ್  ವ್ಯಕ್ತಿಯನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ,ವೈದ್ಯರ ಬಳಿ ಮಾತನಾಡಿದ ಬಳಿಕ ರಕ್ತದೊತ್ತಡ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.  ನಂತರ ವ್ಯಕ್ತಿಯ ಕುಟುಂಬವನ್ನು ಸಂಪರ್ಕಿಸಿ ಆತನನ್ನು ಅವರ ಹುಟ್ಟೂರಾದ ಬಿಜಾಪುರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ .

promotions

promotions

Read More Articles