ಹಲ್ಯಾಳ ಗ್ರಾಮದೇವ ಜಾತ್ರೆ, ಭಂಡಾರದಲ್ಲಿ ಮಿಂದೆತ್ತ ಗ್ರಾಮಸ್ಥರು
- 15 Jan 2024 , 12:26 AM
- Belagavi
- 244
ಅಥಣಿ : ಅಥಣಿ ತಾಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ಶ್ರೀ ಶಿವರಾಯ ಮುತ್ಯಾ ಜಾತ್ರಾಮಹೋತ್ಸವ ಅತಿ ವಿಜೃಂಭಣೆಯಿಂದ ಜರಗಿತು.

ಮುಂಜಾನೆ ಶುಭ ವೇಳೆಯಲ್ಲಿ ಪೂಜಾರಿ ವಿಠ್ಠಲ ಕರೆಪ್ಪ ಸನದಿ ದೇವರಿಗೆ ರುದ್ರಾಭಿಷೇಕ ಹಾಗೂ ನೈವೇದ್ಯ ಮಹಾ ಮಂಗಳಾರತಿಯನ್ನು ಅರ್ಪಿಸಿದರು.

ಈ ವೇಳೆ ಹಿರಿಯ ಕಂಠಿಕಾರ ಶಿವರಾಯ ಹಿರೇಕುರುಬರ, ಗುಂಡು ಕುರುಬರ, ಮುತ್ತಪ್ಪ ಸನದಿ, ತಿಪ್ಪಣ್ಣ ಹಿರೇಕುರುಬರ, ಅಣ್ಣಸಾಹೇಬ ಬಿರಾದರ್, ದೀಪಕ್ ಮುರಗುಂಡಿ, ಸುರೇಶ್ ಬಾಗಿ ಹಾಗೂ ಗ್ರಾಮದ ಎಲ್ಲ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ನಂತರದಲ್ಲಿ ಮಹಾಪ್ರಸಾದ ಸೇವೆ ಜರಗಿತು.










