ರಾಜಕಾರಣಿಗಳ ಸುಳ್ಳು ಭರವಸೆಗಳಿಗೆ ಬೇಸತ್ತ ಹಳ್ಳಿಗರು : ಬೆಳಗಾವಿ-ಗೋವಾ ರಸ್ತೆ ಬಂದ್ ಮಾಡಲು ನಿರ್ದಾರ
- 15 Jan 2024 , 12:53 AM
- Belagavi
- 168
ಬೆಳಗಾವಿ :ರಾಜಕಾರಣಿಗಳು ಆಡುವ ಆಟಕ್ಕೆ ಬೇಸತ್ತ ಬೆಳಗಾವಿ ಜಿಲ್ಲೆಯ ಮಾನ ಗ್ರಾಮಸ್ಥರು ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುತಿದ್ದಾರೆ.

ಈ ಗ್ರಾಮದಲ್ಲಿ ಶಾಲೆ ಇದೆ ಆದರೆ ಕಲಿಸುವ ಮೇಸ್ಟ್ರು ಇಲ್ಲ ,ಹಳ್ಳಿಗರ ಹತ್ತಿರ ಮೋಟಾರು ವಾಹನಗಳು ಇವೆ ಆದರೆ ರೋಡ ಇಲ್ಲ.

ರೋಗಿಗಳನ್ನು ಆಸ್ಪತ್ರೆಗೆ ಸಾಗಿಸ ಬೇಕೆಂದ್ರೆ ಅದೋ ಗತಿ ,ಮಳೆ ಬಂದ್ರೆ ಹಳ್ಳಿಗರ ಪಾಲಿಗೆ ದೇವರೆ ಗತಿ .
ರಾಜಕಾರಣಿಗಳ ಸುಳ್ಳು ಭರವಸೆಗಳಿಗೆ ಬೇಸತ್ತ ಗ್ರಾಮಸ್ಥರು ಅಕ್ಟೋಬರ್ 06 2022 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಎಲ್ಲಾ ಮಾನ್ ಗ್ರಾಮಸ್ಥರ ಪರವಾಗಿ ಡಾಂಬರೀಕರಣಕ್ಕಾಗಿ ಮತ್ತು ತಮ್ಮ್ ಹಕ್ಕುಗಳಿಗಾಗಿ ಬೆಳಗಾವಿ-ಗೋವಾ ಮಾರ್ಗದ ಜಾಂಬೋಟಿಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಈ ಸಮಸ್ಯೆ ಮಾನ ಗ್ರಾಮ ಮಾತ್ರವಲ್ಲದೆ ಜಾಂಬೋಟಿ ಭಾಗದ ಹಲವು ಗ್ರಾಮಗಳು ಇಂದಿಗೂ ಸಮಸ್ಯೆಯನ್ನು ಎದುರಿಸುತ್ತಿವೆ. ಕಳೆದ ಹಲವು ದಶಕಗಳಿಂದ ಮೌನ ವಹಿಸಿದ್ದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ .









