ಸರಕಾರದ ವಿರುದ್ಧ ಸಿಡಿದೆದ್ದ ವಿಶ್ವ ಹಿಂದೂ ಪರಿಷತ್

ಬೆಳಗಾವಿ : ಕಾಂಗ್ರೆಸ್ ಸರಕಾರ ಮತಾಂತರ ಕಾಯ್ದೆ ಹಿಂಪಡೆದಿರುವ ನಿರ್ಧಾರವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶನಿವಾರ ಚನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

promotions

ಭಾರತ ಹಿಂದೂ ರಾಷ್ಟ್ರವಾಗಿದ್ದು, ಇಲ್ಲಿ ಹಿಂದೂಗಳೊಡಣೆ ಅನ್ಯ ಧರ್ಮಿಯರು ಸಹಬಾಳ್ವೆಯನ್ನು ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕರ್ನಾಟಕದಲ್ಲಿಯೂ ಸಹ ಹಿಂದೂಗಳೊಡನೆ ಅನ್ಯ ಧರ್ಮಿಯರು ತಮ್ಮ ಧರ್ಮದ ಮತಾಚರಣೆ ಮಾಡಲು ಅವಕಾಶ ಇದೆ‌. ಇದನ್ನು ನಾವು ಒಪ್ಪುತ್ತೇವೆ.

promotions

ಆದರೆ ಹಿಂದೂಗಳಿಗೆ ಆಮಿಷ ತೋರಿಸಿ ಅಥವಾ ಹೆದರಿಸಿ ಬಲವಂತವಾಗಿ ಮತಾಂತರಿಸುವುದನ್ನು ಅಥವಾ ಮರಳು ಮಾಡಿ ಮತಾಂತರಿಸುವುದನ್ನು ಖಂಡಿಸುತ್ತೇವೆ. ಭಾರತ ಹಿಂದೂ ರಾಷ್ಟ್ರವಾಗಿದೆ. ಕರ್ನಾಟಕ ಭಾರತದ ಒಂದು ಭಾಗವಾಗಿದೆ. ಹಿಂದೂಗಳನ್ನು ಮತಾಂತರದಿಂದ ರಕ್ಷಿಸಿ ನಮ್ಮ ಧರ್ಮ ಕಾಪಾಡುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರಕಾರಕ್ಕೆ ಅನ್ಯ ಧರ್ಮಿಯರಲ್ಲದೆ ಅತೀ ಸಂಖ್ಯೆಯಲ್ಲಿ ಹಿಂದೂಗಳು ಸಹ ಮತ ಹಾಕಿದ್ದಾರೆ. ಅವರ ಮತಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಹೊರತು ಕೇವಲ ಅಲ್ಪ ಸಂಖ್ಯಾತರಿಂದಲ್ಲ.

ಇದು ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ಮತಾಂತರ ಕಾಯ್ದೆ ನಿಷೇಧ ಮಾಡುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

Read More Articles