ದೇಶದ ಪ್ರಗತಿ, ಅಭಿವೃದ್ದಿಗಾಗಿ ಬಿಜೆಪಿಗೆ ಮತ! ಕಾಶ್ಯಂಪುರ

ಬೆಳಗಾವಿ: ಲೋಕಸಭೆ ಚುನಾವಣೆಯ ಬೆಳಕಿನಲ್ಲಿ ಕಾಂಗ್ರೆಸ್ ಖಾಲಿ ಭರವಸೆ ನೀಡಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಬಂಡೆಪ್ಪ ಕಾಶ್ಯಂಪುರ ಹೇಳಿದರು. 

promotions

ಅವರು ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಕುರಿತು ವಿವರಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಮತದಾರರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದರು.

promotions


ರಾಜ್ಯ ಸರ್ಕಾರ ಪ್ರತಿ ನಾಗರಿಕರಿಗೆ 10 ಕೆಜಿ ಅಕ್ಕಿ ನೀಡುವಂತಹ ಈಡೇರಿಸದ ಭರವಸೆಗಳನ್ನು ನೀಡಿ, ಮೋದಿ ಸರ್ಕಾರ ವಿತರಿಸಿದ 5 ಕೆಜಿ ಅಕ್ಕಿಯನ್ನೆ ತಮ್ಮದೆಂದು ಹೇಳುತ್ತಿದೆ. ಉಚಿತ ವಿದ್ಯುತ್ ನೀಡುವ ಗುರಿಯನ್ನು ಹೊಂದಿರುವ ಗೃಹಜ್ಯೋತಿ ಯೋಜನೆಯ ಅನುಷ್ಠಾನಕ್ಕೆ ವಿದ್ಯುತ್ ದರ ಹೆಚ್ಚಿಸಿ, ಗ್ರಾಹಕರಿಗೆ ನೀಡುತ್ತಿರುವದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸರ್ಕಾರವಿದ್ದಾಗ ಇಂತಹ ಯಾವುದೇ ಪೊಳ್ಳು ಭರವಸೆ ನೀಡಿರಲಿಲ್ಲ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜನರಿಗೆ ನೇರವಾಗಿ ತಲುಪುತ್ತಿದ್ದವು , ಜೆಡಿಎಸ್ ಸರ್ಕಾರದ ಕಾಲದಲ್ಲಿ ರೈತರ ಸಾಲವನ್ನು ಮನ್ನಾ ಮಾಡಿ ಅವರಿಗೆ ನೆರವಾಗಿದ್ದೇವು ಆದರೆ ಈಗೀನ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದನೆ ಮಾಡುತ್ತಿಲ್ಲ ಎಂದು ಆಪಾದಿಸಿದರು. ಕರ್ನಾಟಕದ ಜನತೆಯ ಭಾವನೆಗಳ ಜೊತೆ ಆಟ ಆಡುತ್ತಿರುವ ಕಾಂಗ್ರೆಸ್ಸಗೆ ಜನ ಚುನಾವಣಾ ಫಲಿತಾಂಶದ ಮೂಲಕ ಲೋಪದೋಷಗಳಿಗೆ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

 ಪ್ರಧಾನಿ ಮೋದಿಗೆ ಅವರಿಗೆ ಪ್ರತಿ ಹಳ್ಳಿ, ಹಳ್ಳಿಯಲ್ಲಿ ಜನಪ್ರಿಯತೆ ಇದೆ ರಾಷ್ಟ್ರ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಮೋದಿಯವರ ಗೆಲುವು ನಿರ್ಣಾಯಕವಾಗಿದೆ ಎಂದರಲ್ಲದೆ

ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಶೆಟ್ಟರ್ ಅವರನ್ನು ಅತ್ಯಂತ ಬಹುಮತದಿಂದ ಗೆಲ್ಲಿಸುವ ಮೂಲಕ ಸುಭದ್ರ ರಾಷ್ಟ್ರಕ್ಕಾಗಿ ಕೈ ಜೋಡಿಸಿ ಎಂದು ಮನವಿ ಮಾಡಿದರು.

Read More Articles