ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ನೌಕರರಿಗೆ ವಾಕರಸಾಸಂ ನೌಕರರ ಸಂಘದಿಂದ ಪರಿಹಾರ ಧನ

ಬೆಳಗಾವಿ : ಸೇವೆಯಲ್ಲಿರುವಾಗಲೇ ಮೃತಪಟ್ಟ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಅಲವಂಭಿತರಿಗೆ, ಬೆಳಗಾವಿಯ ವಾಕರಸಾ ಸಂಸ್ಥೆಯ ನೌಕರರ ಸಹಕಾರ ಸಂಘ ನಿಯಮಿತ ಇದರ ವತಿಯಿಂದ ತಲಾ 50 ಸಾವಿರ ರೂ. ಮರಣ ಪರಿಹಾರ ಧನ ವಿತರಿಸಲಾಯಿತು.  

promotions

ಸೇವೆಯಲ್ಲಿರುವಾಗ ಹೃದಯಾಘಾತದಿಂದ ಮೃತಪಟ್ಟ ಸಂಘದ ಸದಸ್ಯರಾದ ಗೋಕಾಕ ಘಟಕದ ಸಂಚಾರ ನಿಯಂತ್ರಕ ದಿ. ಸುಭಾಷ್ ವಾಯ್. ಜಕರಡ್ಡಿ, ಸವದತ್ತಿ ಘಟಕದ ಚಾಲಕ ಕಂ ನಿರ್ವಾಹಕ ದಿ. ಮೂಗಪ್ಪ ಶಿವಪುತ್ರಪ್ಪ ಸಂಗೊಳ್ಳಿ ಇವರ ಅವಲಂಬಿತರಿಗೆ ನೌಕರರ ಸಹಕಾರ ಸಂಘದ ಅಧ್ಯಕ್ಷ ಎಸ್ ಪಿ ಶಿಗಿಹಳ್ಳಿ ಇವರು 78 ನೇಯ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಸಂಘದ ವತಿಯಿಂದ ಮರಣ ಪರಿಹಾರ ಧನ ವಿತರಿಸಿದರು. 

promotions

ಈ ಸಂದರ್ಭದಲ್ಲಿ ಸಂಘದ ಆಡಳಿತ ನಿರ್ದೇಶಕ ಎಸ್. ಬಡಿಗೇರ, ಮಲ್ಲಿಕಾರ್ಜುನ್ ಸಜ್ಜನ್, ಸುಜಾತ ಚಂಬಾರ, ಎಂ. ಜಿ. ದಿನ್ನಿಮನಿ,ಸುರೇಶ ವಕ್ಕುಂದ, ಬಿ.ವಿ. ಲಗಳಿ, ಕೆ. ಎಚ್. ಮುಲ್ತಾನಿ, ಎ. ಎನ್.ಗುಡದಿ ಕಾನೂನು ಸಲಹೆಗಾರ ಡಿ. ಎಸ್. ದೇವರಮನಿ, ಗಿರೀಶ್ ಕಾಂಬಳೆ, ಕಾರ್ಯದರ್ಶಿ ರಾಘವೇಂದ್ರ, ಲೆಕ್ಕಿಗ ದೀಪಕ್ ದೇಶಪಾಂಡೆ, ಸಹಾಯಕ ಸಿಬ್ಬಂದಿ ಶೀತಲ್ ಹಜಾರೆ, ಎಸ್. ಬಿ. ವಾಲಿಕಾರ, ಎಸ್‌.ಎಂ. ಪಾಟೀಲ ಹಾಗೂ ಬಾಬು ಹುಲಕುಂದ ಇದ್ದರು.

Read More Articles