ಸತತ ಮಳೆಯಿಂದ ಗೋಡೆ ಕುಸಿತ. ಅಪಾಯದಿಂದ ಪಾರಾದ ಗರ್ಭಿಣಿ

ಬೆಳಗಾವಿ :  ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳ ಗೋಡೆಗಳು ಕುಸಿಯುತ್ತಿದ್ದು, ತುಂಬು ಗರ್ಭಿಣಿ ಕ್ಷಣಾರ್ಧದಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿ, ಮಳೆಯಲ್ಲಿ ರಾತ್ರಿ ಕಳೆದ ಘಟನೆ ಖಾನಾಪುರ ತಾಲೂಕಿನ ಕಳಮಳಗಿ ಗ್ರಾಮದಲ್ಲಿ ನಡೆದಿದೆ.

promotions

 ತಾಲೂಕಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ತುಂಬು ಗರ್ಭಿಣಿ ಇದ್ದ ಮನೆಯ ಗೋಡೆ ಕುಸಿದು ಅವಾಂತರ ಸೃಷ್ಟಿ ಮಾಡಿದೆ. ಮನೆಯಲ್ಲಿ ಆರು ಜನರು ವಾಸವಾಗಿದ್ದರು. ಏಕಾಏಕಿ‌ ಮನೆಯ ಗೋಡೆಯು ಕುಸಿದಿದ್ದರಿಂದ ದಿಕ್ಕುತೋಚದ ಮನೆಯ ಮಂದಿ ರಾತ್ರಿಯಿಡಿ ಮಳೆಯಲ್ಲಿಯೇ ಕಾಲ ಕಳೆಯುವಂತೆ ಆಯಿತು. 

promotions

ನಿರಂತರ ಜೋರಾಗಿ ಸುರಿಯುತ್ತಿರುವ ಮಳೆಯಿಂದ ಮನೆ ಬಿದ್ದು ಅವಾಂತರ ಸೃಷ್ಟಿಯಾದರೂ ಸೌಜನ್ಯಕ್ಕಾದರೂ ಸಹ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡದಿರುವದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಂದಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಗೋಡೆ ಕುಸಿತ ಕಂಡಿದೆ.

Read More Articles