ಉತ್ತರ ಕರ್ನಾಟಕದಲ್ಲಿ ಜಲದಿಗ್ಬಂಧನ. ಸೇತುವೆಗಳು ಜಲಾವೃತ

ಬೆಳಗಾವಿ : ನದಿಗಳ ಅಬ್ಬರದಿಂದ ತತ್ತರಿಸಿದ ಬೆಳಗಾವಿ ಜಿಲ್ಲೆಯ ಜನರು, ಇಡೀ ರಾತ್ರಿ ನಿದ್ದೆಯಿಲ್ಲದೆ ಕಂಗೆಟ್ಟು, ದೂಧಗಂಗಾ ನದಿಯ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮ ಖಾಲಿ ಮಾಡಿ, ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. 

promotions

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂಧಗಂಗಾ ನದಿ, ಗ್ರಾಮದ ಕುರುಬರ ಗಲ್ಲಿಗೆ ದೂಧಗಂಗಾ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. 

promotions

ಮನೆಯೊಳಗೆ ನೀರು ನುಗ್ಉವ ಭಯದಿಂದ ಊರು ಖಾಲಿ ಮಾಡಿ ಗ್ರಾಮದ ಹೊರಗಿನ ಶಾಲೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಜಲ ದಿಗ್ಬಂಧನ ಉಂಟಾಗಿದ್ದು, ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಸಂಪೂರ್ಣ ಜಲಾವೃತವಾಗಿದೆ.

 ಉಕ್ಕಿ ಹರಿಯುತ್ತಿರುವ ದೂದಗಂಗಾ ನದಿ ಹಾಗೂ ಮಹಾರಾಷ್ಟ್ರದಿಂದ ಬರುತ್ತಿರುವ ಅಪಾರ ಪ್ರಮಾಣದ ನೀರು ಮತ್ತು ಕಳೆದ ೧೫ ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಸದಲಗಾ-ಬೋರಗಾಂವ ಬೃಹತ್ ಸೇತುವೆ ಮುಳುಗಡೆಯಾಗಿದೆ.

Read More Articles