ಬಾರಿ ಮಳೆ ಹಿನ್ನಲೆ ದರ್ಗಾಗೆ ನುಗ್ಗಿದ ನೀರು
- shivaraj B
- 9 Jul 2024 , 1:46 PM
- Chikodi
- 835
ಚಿಕ್ಕೋಡಿ : ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮುಂದುವರೆದ ಬಾರಿ ಮಳೆಯ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು,

ಯಕ್ಸಂಬಾ ಬಳಿಯ ಮುಲ್ಲಾಂಕಿ ಹಜರತ್ ಮನಸುರಾಲಿ ದರ್ಗಾಗೆ ದೂದಗಂಗಾ ನದಿಯ ನೀರು ನುಗ್ಗಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ಬಿಟ್ಟುಬಿಡದೇ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಅನಾಹುತಕಾರಿ ಮಳೆಯಿಂದಾಗಿ ಹಲವು ಅವಾಂತರ ಸೃಷ್ಠಿಯಾಗಿದೆ.
ಈಗಾಗಲೇ ಚಿಕ್ಕೋಡಿ ವ್ಯಾಪ್ತಿಯ ಐದು ಕೆಳಹಂತದ ಸೇತುವೆಗಳು ಜಲಾವೃತಗೊಂಡು, ಅಪಾಯದ ಮಟ್ಟ ಮೀರಿ ಕಷ್ಣಾ, ವೇದಗಂಗಾ, ದೂದಗಂಗಾ ಹಾಗೂ ಪಂಚಗಂಗಾ ನದಿಗಳು ಹರಿಯುತ್ತಿವೆ.










