ಡಿಜಿಟಲ್ ಸುದ್ದಿ ಪ್ರಕಾಶಕರಿಗೆ ಇರುವ ನೀತಿ ಸಂಹಿತೆ ಯಾವುವು ...?

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿಗಳು, 2021 ರ ಮಹತ್ವವೇನು?
ಕಳೆದ ಹಲವಾರು ವರ್ಷಗಳಲ್ಲಿ ಡಿಜಿಟಲ್ ಮಾಧ್ಯಮವು ಬೆಳೆದಿದೆ. ಅನೈನ್ ಸುದ್ದಿ ಪೋರ್ಟಲ್ಗಳು. ಒಟಿಟಿ ಪ್ಲಾಟ್ನಾರ್ಮ್ಗಳು ಮುಂತಾದ ಅನೇಕ ಹೊಸ ಭಾಗಿದಾರರು ಅಂತರ್ಜಾಲದಲ್ಲಿ ಸಾಮಾನ್ಯವಾಗಿದ್ದಾರೆ. ಈ ನಿಯಮಾವಳಿಗಳು ಮಾಧ್ಯಮ ಮತ್ತು ಕಲಾವಿದರು ಸೇರಿದಂತೆ ನಾಗರಿಕರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತಲೇ ಈ ಘಟಕಗಳಿಗೆ ಸಾಂಸ್ಥಿಕ ಕಾರ್ಯವಿಧಾನವನ್ನು ಒದಗಿಸುತ್ತವೆ. ನಾಗರಿಕರನ್ನು ಸಶಕ್ತಗೊಳಿಸುತ್ತವೆ ಮತ್ತು ಮಕ್ಕಳನ್ನು ಹಾನಿಕಾರಕ ವಿಷಯಗಳಿಂದ ರಕ್ಷಿಸುತ್ತವೆ.

promotions

ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿ ಮಾಧ್ಯಮ ವ್ಯಕ್ತಿಗಳಿಗೆ ಮಾನ್ಯತೆ ಮತ್ತು ಅವಕಾಶಗಳನ್ನು ಒದಗಿಸುವಾಗ ಭಾರತದಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಸುಸ್ಥಿರ ಮತ್ತು ದೀರ್ಘಕಾಲೀನ ಅಭಿವೃದ್ಧಿಯನ್ನು ಈ ನಿಯಮಾವಳಿಗಳು ಖಚಿತಪಡಿಸುತ್ತವೆ.

promotions

ಯಾವ ಕಾನೂನಿನಡಿಯಲ್ಲಿ ನಿಯಮಾವಳಿಗಳನ್ನು ರೂಪಿಸಲಾಗಿದೆ….?ಅವುಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆಯೇ…?
ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ವನ್ನು ಸಂಸತ್ತು ಅಂಗೀಕರಿಸಿದೆ. ನಿಯಮಾವಳಿಗಳನ್ನು ಈ ಕಾಯಿದೆಯಡಿ ಮಾಡಲಾಗಿದೆ ಮತ್ತು ಅವುಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.

ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಒಟಿಟಿ ಪ್ಲಾಟ್‌ ಫಾರ್ಮ್‌ಗಳಿಗೆ ನಿಯಮಾವಳಿಗಳು ಎಂದಿನಿಂದ ಅನ್ವಯವಾಗುತ್ತವೆ…?
ನಿಯಮಾವಳಿಗಳು 2021 ರ ಫೆಬ್ರವರಿ 25 ರಿಂದ ಜಾರಿಗೆ ಬಂದಿವೆ.
ಈ ನಿಯಮಾವಳಿಗಳ ಬಗ್ಗೆ ವಿವರವಾಗಿ ಎಲ್ಲಿ ಓದಬಹುದು?
ನಿಯಮಾವಳಿಗಳನ್ನು ಸಚಿವಾಲಯದmib.govಜಾಲತಾಣದಲ್ಲಿ ನೋಡಲು ಕ್ಲಿಕ್ ಮಾಡಿ .

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿಗಳು, 2021 ರ ವ್ಯಾಪ್ತಿಯಲ್ಲಿ ಯಾವ ಘಟಕಗಳು ಬರುತ್ತವೆ?
ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳ ಪ್ರಕಾಶಕರು, ಆನೈನ್ ಇತರರು ಸಿದ್ಧಪಡಿಸಿದ ವಿಷಯಗಳ (ಕ್ಯುರೇಟೆಡ್‌ ಕಂಟೆಂಟ್) ಪ್ರಕಾಶಕರು (ಸಾಮಾನ್ಯವಾಗಿ ಒಟಿಟ ಪ್ಲಾಟ್‌ ಫಾರ್ಮ್‌ಗಳು ಎಂದು ಕರೆಯಲಾಗುತ್ತದೆ) ಮತ್ತು ಮಧ್ಯವರ್ತಿಗಳಿಗೆ ಈ ನಿಯಮಾವಳಿಗಳು ಅನ್ವಯಿಸುತ್ತವೆ.

ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳ ಪ್ರಕಾಶಕ ಘಟಕಗಳು ಯಾವುವು?
ಆನೈನ್‌ ಪತ್ರಿಕೆ, ಸುದ್ದಿ ಪೋರ್ಟಲ್, ನ್ಯೂಸ್ ಅಗ್ರಿಗೇಟರ್ , ನ್ಯೂಸ್ ಏಜೆನ್ಸಿ ಇತ್ಯಾದಿ ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳ ಪ್ರಕಾಶಕರು, ಈ ರೀತಿಯ ಕಾರ್ಯಗಳನ್ನು ನಿರ್ವಹಿಸುವ ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳ ವಿಷಯ ಪ್ರಕಾಶನದ ಇತರ ಘಟಕಗಳು,
ಆನೈನ್‌ ಇತರರು ಸಿದ್ಧಪಡಿಸಿದ ವಿಷಯಗಳ (ಕ್ಯುರೇಟೆಡ್ ಕಂಟೆಂಟ್)

ಅಂತರ್ಜಾಲದಲ್ಲಿ ಯಾವ ವಿಷಯವನ್ನು ಬೇಡಿಕೆಯ ಮೇರೆಗೆ ಎಂದು ಕರೆಯಬಹುದು?
ಆಯ್ಕೆ ಮಾಡಿದ ಸಮಯದಲ್ಲಿ ಬಳಕೆದಾರ, ಚಂದಾದಾರ ಅಥವಾ ವೀಕ್ಷಕರು ಆಯ್ಕೆ ಮಾಡಬಹುದಾದ ಮತ್ತು ಪ್ರವೇಶಿಸಬಹುದಾದ ವಿಷಯವನ್ನು ಬೇಡಿಕೆಯ ಮೇಲೆ ಲಭ್ಯವಿರುವುದು ಎಂದು ಕರೆಯಬಹುದು.

ನಿಯಮಗಳು ಪ್ರಕಾಶಕರ ಜಾಲತಾಣಗಳಿಗೆ ಮಾತ್ರ ಅನ್ವಯವಾಗುತ್ತವೆಯೇ ?
ಪ್ರಸಾರಕ್ಕಾಗಿ ಬಳಸುವ ಯಾವುದೇ ಆನೈನ್ ವಿಧಾನಗಳಲ್ಲೂ ಪ್ರಕಾಶಕರು ವಿಷಯ ಪ್ರಸಾರದ ನಿಯಮಗಳನ್ನು ಗಮನಿಸಬೇಕು.

ಡಿಜಿಟಲ್ ಸುದ್ದಿ ಪ್ರಕಾಶಕರಿಗೆ ಇರುವ ನೀತಿ ಸಂಹಿತೆ ಯಾವುದು?
ಭಾರತೀಯ ಪತ್ರಿಕಾ ಮಂಡಳಿಯ ಪತ್ರಿಕೋದ್ಯಮ ನಡವಳಿಕೆಯ ನಿಯಮಗಳು
presscouncil.nic.inಕ್ಲಿಕ್ ಮಾಡಿ .

ನೀತಿ ಸಂಹಿತೆಯು ಸುದ್ದಿ ಪ್ರಕಾಶಕರಿಗೆ ಹೊಸ ನಿರ್ಬಂಧಗಳನ್ನು ವಿಧಿಸುತ್ತದೆಯೆ?
ಡಿಜಿಟಲ್‌ ಸುದ್ದಿ ಪ್ರಕಾಶಕರು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಅನುಸರಿಸಬೇಕೆಂದು ನೀತಿ ಸಂಹಿತೆಯು ಷರತ್ತು ವಿಧಿಸುತ್ತದೆ. ಯಾವುದೇ ಹೊಸ ಕಾನೂನು ಅಥವಾ ನಿಯಂತ್ರಣವನ್ನು ಸೂಚಿಸಲಾಗಿಲ್ಲ. ಕೆಲವು ಸುದ್ದಿ ಜಾಲತಾಣಗಳು ಈಗಾಗಲೇ ಮುದ್ರಣ ಮತ್ತು ಟಿವಿ ಸುದ್ದಿ ಮಾಧ್ಯಮಗಳ ಮಾನದಂಡಗಳನ್ನು ಅನುಸರಿಸುತ್ತಿರಬಹುದು, ಆದರೆ ಡಿಜಿಟಲ್ ಸುದ್ದಿಗಳು ಪತ್ರಿಕೋದ್ಯಮ ನಡವಳಿಕೆಯ ನಿಯಮಗಳನ್ನು (ಮುದ್ರಣಕ್ಕೆ ಅನ್ವಯಿಸುತ್ತದೆ) ಮತ್ತು ಕೇಬಲ್ ಟೆಲಿವಿಷನ್ ನೆಟ್ವರ್ಕ್ಗಳ ನಿಯಂತ್ರಣದಡಿಯಲ್ಲಿ ಪ್ರೋಗ್ರಾಂ ಕೋಡ್ ಅನ್ನು (ಟಿವಿ ಮಾಧ್ಯಮ) ಅನುಸರಿಸಬೇಕು ಎಂದು ನೀತಿ ಸಂಹಿತೆ ಹೇಳುತ್ತದೆ. ಆ ಮೂಲಕ ಸುದ್ದಿ ಮಾಧ್ಯಮ ಉದ್ಯಮದಲ್ಲಿ ಸಮಾನ ಅವಕಾಶವನ್ನು ಸೃಷ್ಟಿಸುತ್ತದೆ.

ಡಿಜಿಟಲ್ ಮಾಧ್ಯಮದಲ್ಲಿನ ವಿಷಯಕ್ಕೆ ಸಂಬಂಧಿಸಿದ ಸಾರ್ವಜನಿಕರ ಕುಂದುಕೊರತೆಗಳನ್ನು ನಿರ್ವಹಿಸಲು ಸಾಂಸ್ಥಿಕ ವ್ಯವಸ್ಥೆಯ ಮೂರು ಹಂತಗಳು ಯಾವುವು?
ಸಾರ್ವಜನಿಕರ ಕುಂದುಕೊರತೆಗಳನ್ನು ಸಮಯೋಚಿತವಾಗಿ ಪರಿಹರಿಸಲಾಗುವುದು. ನಿಯಮಗಳು ಈ ಉದ್ದೇಶಕ್ಕಾಗಿ ಮೂರು ಹಂತದ ರಚನೆಯನ್ನು ಸ್ಥಾಪಿಸುತ್ತವೆ.
ಹಂತ I- ಪ್ರಕಾಶಕರಿಂದ ಸ್ವಯಂ ನಿಯಂತ್ರಣ
ಹಂತ II - ಪ್ರಕಾಶಕರ ಸ್ವಯಂ ನಿಯಂತ್ರಣ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ
ಹಂತ III- ಕೇಂದ್ರ ಸರ್ಕಾರದ ಮೇಲ್ವಿಚಾರಣಾ ವ್ಯವಸ್ಥೆ.

ಸ್ವಯಂ-ನಿಯಂತ್ರಿತ ವ್ಯವಸ್ಥೆಯಲ್ಲಿ ಪ್ರಕಾಶಕರು ಯಾವ ಸ್ವಾತಂತ್ರ್ಯವನ್ನು ಚಲಾಯಿಸುತ್ತಾರೆ ? ಸರ್ಕಾರದ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆಯೇ
ಸಾಂಸ್ಥಿಕ ಕಾರ್ಯವಿಧಾನವು ಎರಡು ಹಂತದ ಸ್ವಯಂ ನಿಯಂತ್ರಣವನ್ನು ಸ್ಥಾಪಿಸುತ್ತದೆ- ಹಂತ I ಪ್ರಕಾಶಕ ಮತ್ತು ಹಂತ II ಸ್ವಯಂ ನಿಯಂತ್ರಣ ಸದಸ್ಯ. ಸ್ವಯಂ-ನಿಯಂತ್ರಣ ವ್ಯವಸ್ಥೆಯ ಪ್ರಕಾಶಕರೇ ಸ್ವತಃ ರಚಿಸಿದ ಉದ್ಯಮ ಸಂಸ್ಥೆಯಾಗಿದೆ. ಸುಪ್ರೀಂ ಕೋರ್ಟ್ / ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಅಥವಾ ಉದ್ಯಮಕ್ಕೆ ಸಂಬಂಧಿಸಿದ ಕ್ಷೇತ್ರಗಳ ಪ್ರಖ್ಯಾತ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿರುವದರಿಂದ, ಇದು ಪ್ರತಿಷ್ಠಿತ ಮತ್ತು ಉನ್ನತ ಸ್ಥಾನಮಾನವನ್ನು ಹೊಂದಿರುತ್ತದೆ. ಮೊದಲ ಎರಡು ಹಂತಗಳಲ್ಲಿ ಬಗೆಹರಿಯದ ಪ್ರಕರಣಗಳನ್ನು ಮೂರನೇ ಹಂತದಲ್ಲಿ ಮೇಲ್ವಿಚಾರಣ ವ್ಯವಸ್ಥೆಯ ಮೂಲಕ ಸರ್ಕಾರವು ಪಾತ್ರ ವಹಿಸುತ್ತದೆ.

ಸ್ವಯಂ ನಿಯಂತ್ರಣ ಸಂಸ್ಥೆಗಳನ್ನು ಸಚಿವಾಲಯ ನೊಂದಾಯಿಸುತ್ತದೆಯೇ ?
ಸಂಸ್ಥೆಯನ್ನು ನಿಯಮಗಳ ನಿಬಂಧನೆಗಳಿಗೆ ಅನುಗುಣವಾಗಿ ರಚಿಸಲಾಗಿದೆ ಮತ್ತು ನಿಯಮಗಳಲ್ಲಿ ತಿಳಿಸಲಾದ ಕಾರ್ಯಗಳನ್ನು ನಿರ್ವಹಿಸಲು ಒಪ್ಪಿಕೊಂಡಿದೆ ಎಂದು ತಿಳಿದ ನಂತರ ಸ್ವಯಂ-ನಿಯಂತ್ರಣ ಸಂಸ್ಥೆಗಳನ್ನು ಸಚಿವಾಲಯವು ನೋಂದಾಯಿಸುತ್ತದೆ.

Read More Articles