ಅಭಿವೃದ್ಧಿಯಲ್ಲಿ ಬೆಳಗಾವಿ ಬಿಜೆಪಿ ಸಂಸದರ ಕೊಡುಗೆ ಏನು ಟೋಪಣ್ಣವರ ಪ್ರಶ್ನೆ
- 14 Jan 2024 , 10:02 PM
- Belagavi
- 137
ಬೆಳಗಾವಿ : ಕರ್ನಾಟಕ ಸರಕಾರ ಹುಬ್ಬಳ್ಳಿ - ಧಾರವಾಡ ಹಾಗೂ ಬೆಳಗಾವಿಯಲ್ಲಿ ಉದ್ಯಮ ಸೃಷ್ಠಿ ಮಾಡುವ ಉದ್ದೇಶದಿಂದ ಟೆಕ್ಲೆರೆಥಾನ್ ಎಂಬ ಕಾರ್ಯಾಕ್ರಮ ವನ್ನು ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಅಕ್ಟೋಬರ್ 2 ಮತ್ತು 3 ರಂದು ಮಾಡುತ್ತಿದ್ದಾರೆ. ಸರಕಾರದ ಬೆಂಗಳೂರು ಹೊರತು ಪಡಿಸಿ ಉತ್ತರ ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿ ಮಾಡಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ರಾಜ್ಯದಲ್ಲಿ ಅತೀ ಹೆಚ್ಚು ತೆರಿಗೆ ತುಂಬಲು ಬೆಳಗಾವಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ತೆರಿಗೆ ತುಂಬಲು ಬೆಳಗಾವಿ ಬೇಕು. ನಮಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಸರಕಾರದ ಕ್ರಮವನ್ನು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಖಂಡಿಸಿದ್ದಾರೆ.

ಕಳೆದ ಬಾರಿಯೂ ಬೆಳಗಾವಿಗೆ ಸಂಬಂದಿಸಿದ್ದ ಕೈಗಾರಿಕಾ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಹುಬ್ಬಳಿಯಲ್ಲಿ ಆಯೋಜನೆ ಮಾಡಿ ಬೆಳಗಾವಿಗೆ ಅನ್ಯಾಯ ಮಾಡಿತ್ತು. ಇದಕ್ಕೆ ಮುಖ್ಯ ಕಾರಣ ಬೆಳಗಾವಿಯ ಬಿಜೆಪಿ ಶಾಸಕ, ಸಂಸದರು ತಮ್ಮ ವೈಯಕ್ತಿಕ ಸಾಮ್ರಾಜ್ಯ ಬೆಳೆಸುವಲ್ಲಿ ನಿರತರಾಗಿದ್ದಾರೆ. ಬೆಳಗಾವಿ ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ಮುಂದೆ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ - ಧಾರವಾಡದ ಬಿಜೆಪಿ ನಾಯಕರ ಮುಂದೆ ಮಾತನಾಡಲು ಬೆಳಗಾವಿ ಬಿಜೆಪಿ ಶಾಸಕರು ಹಾಗೂ ಸಂಸದರಿಗೆ ಸಾಧ್ಯವಾಗುತ್ತಿಲ್ಲ. ಇವರು ತಮ್ಮ ಟಿಕೆಟ್ ಭದ್ರಪಡಿಸಿಕೊಳ್ಳಲು ಬೆಳಗಾವಿಯ ಅಭಿವೃದ್ಧಿಯನ್ನು ಬಲಿ ಕೊಡುತ್ತಿದ್ದಾರೆ ಎಂದ ಅವರು, ಹುಬ್ಬಳ್ಳಿ- ಧಾರವಾಡದಲ್ಲಿ ಸರಕಾರ ಮಾಡುತ್ತಿರುವ ಕಾರ್ಯಕ್ರಮಕ್ಕೆ ನಮ್ಮ ವಿರೋಧ ಇಲ್ಲ. ಬೆಳಗಾವಿಗಾಗಿ ಪ್ರತ್ಯೇಕ ಕಾರ್ಯಕ್ರಮ ಸರಕಾರ ಆಯೋಜನೆ ಮಾಡಬೇಕು. ಇಲ್ಲಿಯೂ ಉತ್ತಮವಾದ ಮೂಲಭೂತ ಸೌಕರ್ಯ ಇವೆ ಎಂದಿರುವ ಅವರು, ಅನುಕಂಪ ಮತ್ತು ಭಾವನಾತ್ಮಕ ಆಧಾರದ ಮೇಲೆ ಬೆಳಗಾವಿ ಜನರು ಮತ ಕೊಟ್ಟರೆ ಸಂಸದರು ಮಾಡುತ್ತಿರುವುದಾದರೂ ಏನು ಎಂದು ಪ್ರಟಕಣೆಯಲ್ಲಿ ಪ್ರಶ್ನಿಸಿದ್ದಾರೆ.










