ಗೂಳಿಹಟ್ಟಿ ಶೇಖರಗೂ ನಾಗ್ಪುರ್ ಗೂ ಏನು ಸಂಬಂಧ : ಅಶೋಕ
- shivaraj bandigi
- 15 Jan 2024 , 3:33 AM
- Belagavi
- 286
ಬೆಳಗಾವಿ :

ಗೂಳಿಹಟ್ಟಿ ಶೇಖರ್‌ಗೂ ನಾಗ್ಪುರಕ್ಕೂ ಏನು ಸಂಬಂಧ. ನಾನೇ ನಾಗ್ಪುರಕ್ಕೆ ಹೋಗಿಲ್ಲ. ನಾನು ಹತ್ತನೇ ವರ್ಷಕ್ಕೆ ಆರ್ ಎಸ್ ಎಸ್ ಚೆಡ್ಡಿ ಹಾಕಿದವನು ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರ್ ಎಸ್ ಎಸ್ ನಲ್ಲಿ ಒಂದು ವರ್ಷ ಪ್ರಚಾರಕನಾಗಿ ಕೆಲಸ ಮಾಡಿದ್ದೇನೆ. 45 ವರ್ಷ ಇದ್ದು ನಾನೇ ನಾಗ್ಪುರಕ್ಕೆ ಹೋಗಿಲ್ಲ. ಇವನಿಗೆ ಹಾಗೂ ಆರ್ ಎಸ್ ಎಸ್ ಗೂ ಸಂಬಧವೇ ಇಲ್ಲ. ಅದರ ಗಂಧ ಗಾಳಿ ಏನೂ ಇಲ್ಲ. ಕಾಂಗ್ರೆಸ್ ನ ಕದ ತಟ್ಟೋಕೆ ಏನಾದರೂ ಬೇಕಾಗಿದೆ. ಕಾಂಗ್ರೆಸ್ ಸೇರೋದಕ್ಕೋಸ್ಕರ ಪಿತೂರಿ ಮಾಡಿದಾರೆ ಎಂದರು.
ಆರ್ ಎಸ್ ಎಸ್ ನಲ್ಲಿ ಎಂದೂ ಜಾತಿಯನ್ನ ಕೇಳಿಲ್ಲ. ಜಾತಿಯನ್ನ ಹೇಳಬಾರದು ಅನ್ನೋ ಕಂಡಿಷನ್ ಸಹ ಇದೆ. ನಾಗ್ಪುರ ಸೂಕ್ಷ್ಮ ಪ್ರದೇಶ ಇರೋದ್ರಿಂದ ಚೆಕ್ಕಿಂಗ್ ಇರುತ್ತೆ. ಆದರೆ ಅದು ಸಂಘದ ಚೆಕ್ಕಿಂಗ್ ಅಲ್ಲ.ಪೊಲೀಸರ ಚೆಕ್ಕಿಂಗ್. ನಾನು ಹೋದರೂ ಸಹ ಚೆಕ್ ಮಾಡ್ತಾರೆ ಎಂದರು.










