ಅಧಿವೇಶನದಲ್ಲಿ ಚರ್ಚೆ ನಡೆಸದ ಉತ್ತರಕುಮಾರರು ಯಾರು ?

ಬೆಳಗಾವಿ :

promotions

ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಚರ್ಚೆ ನಡೆಸಲು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿ ಬರೋಬರಿ ಒಂದು ದಶಕವೇ ಕಳೆದಿದೆ. ಆದರೆ ಇಲ್ಲಿಯವರೆಗೆ ಆಡಳಿತ ನಡೆಸಿದ ಸರಕಾರ ಹಾಗೂ ವಿರೋಧ ಪಕ್ಷಗಳಿಗೆ ಉತ್ತರ ಕರ್ನಾಟಕ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ.

promotions

ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಲು ಸರಕಾರ ಸಿದ್ದವಿದ್ದರೂ ವಿರೋಧ ಪಕ್ಷದಲ್ಲಿರುವ ಬಿಜೆಪಿಯ ನಾಯಕರು ಪ್ರತಿಷ್ಠೆಗಾಗಿ ಸದನ ಬಳಕೆ ಮಾಡಿಕೊಂಡಿದ್ದಾರೆ ಎಂದು ಸರಕಾರದ ಸಚಿವರು ಆರೋಪಿಸುತ್ತಿದ್ದಾರೆ.

ರಾಜ್ಯ ವಿಧಾನಸಭೆ ಮುಗಿದ ಬರೋಬರಿ ಆರು ತಿಂಗಳ ಬಳಿಕ ಬಿಜೆಪಿ ವಿರೋಧ ಪಕ್ಷದ ನಾಯಕರಾಗಿ ಆರ್‌. ಅಶೋಕ ಅವರನ್ನು ನೇಮಕ ಮಾಡಿತ್ತು. ಇದರಿಂದ ಉತ್ತರ ಕರ್ನಾಟಕದ ಒಂದಿಷ್ಟು ಬಿಜೆಪಿ ಶಾಸಕರು ಅಸಮಾಧಾನಗೊಂಡಿದ್ದರು. ಅದರಲ್ಲಿ ಪ್ರಮುಖವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ. ಸರಕಾರದ ವಿರುದ್ಧ ಚಾಟಿ ಬಿಸುವುದರ ಜೊತೆಗೆ ತಮ್ಮ ಪಕ್ಷದ ನಾಯಕರ ವಿರುದ್ಧವೆ ಸದನದಲ್ಲಿ ವಾಗ್ದಾಳಿ ನಡೆಸಿದ್ದರು. ಅಷ್ಟೆ ಅಲ್ಲ, ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಅಶೋಕ ಅವರಿಗೆ ಅಭಿನಂದನೆ ಸಲ್ಲಿಸುವ ವೇಳೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಯತ್ನಾಳ ಗೆ ಕೇಳಿದರು. ಕೈ ಸನ್ನೆ ಮಾಡಿ ಮಾಡುವುದಿಲ್ಲ ಎಂದಿದ್ದು ಅಶೋಕಗೆ ಇರುಸು, ಮುರುಸಾಗಿತ್ತು.

ಅದೇನೇ ಇರಲಿ ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಶಾಸಕರಾದ ಲಕ್ಷ್ಮಣ ಸವದಿ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ, ರಾಜು ಕಾಗೆ, ಕೋನರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ವಿನಯ ಕುಲಕರ್ಣಿ, ಪ್ರಕಾಶ ಕೋಳಿವಾಡ ಸೇರಿದಂತೆ ಕೆಲವೇ ಕೆಲವು ಶಾಸಕರು ಮಾತ್ರ ಎನ್ನುವುದು ಗಮನಾರ್ಹ ಸಂಗತಿ.

ಉತ್ತರ ಕರ್ನಾಟಕ ಶಾಸಕರು ಅರ್ಧಕ್ಕಿಂತ ಹೆಚ್ಚು ಜನರಿದ್ದಾರೆ. ಮೇಲಿನ ಶಾಸಕರು ಬಿಟ್ಟರೆ ಉಳಿದವರಿಗೆ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆ ಮಾಡಲು ಮನಸ್ಸಿಲ್ಲವೇ ? ಅಥವಾ ಅವರ ಕ್ಷೇತ್ರದಲ್ಲಿ ಸಮಸ್ಯೆಯೇ ಇಲ್ಲವೇ ಎನ್ನುವುದನ್ನು ಅವರವರ ಕ್ಷೇತ್ರದ ಜನರು ಪ್ರಶ್ನೆ ಮಾಡಬೇಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರಕಾರದ ಎಲ್ಲ ಸಚಿವರು ಉತ್ತರ ಕರ್ನಾಟಕ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರೆ ಉತ್ತರ ಕೊಡಲು ಸರಕಾರ‌ ಸಿದ್ಧವಿದೆ. ಎಂದು ಹೇಳಿದ್ದರೂ ಬಿಜೆಪಿ ಮಾಡಿದ್ದು ರಾಜಕೀಯ ಎನ್ನುವುದು ಸಚಿವರ ಆರೋಪವಾಗಿದೆ.

Read More Articles