ಶಿವಾಜಿ ಮೂರ್ತಿ ಉದ್ಘಾಟನೆಯ ವೇಳೆ ಹೆಬ್ಬಾಳ್ಕರ್ ಭಾವುಕರಾಗಿದ್ದು ಏಕೆ ?
- Shivaraj Bandigi
- 14 Jan 2024 , 3:42 PM
- Belagavi
- 183
ಬೆಳಗಾವಿ: ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ನನ್ನ ಮೇಲೆ ಪ್ರಕರಣ ದಾಖಲಿಸಿದೆ ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಭಾವುಕರಾದರು.

LIVE : ಐತಿಹಾಸಿಕ ರಾಜಹಂಸಗಡದಲ್ಲಿ ನಡೆಯುತ್ತಿರುವ ಭವ್ಯ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಸಮಾರಂಭದ ನಿಮಿತ್ತ ಆಯೋಜಿಸಿರುವ ಲೇಸರ್ ಶೋ, ಕ್ರ್ಯಾಕರ್ ಶೋ ಮತ್ತಿತರ ಕಾರ್ಯಕ್ರಮಗಳ ನೇರ ಪ್ರಸಾರ.
Laxmi Hebbalkar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮಾರ್ಚ್ 5, 2023
ಅವರು ಭಾನುವಾರ ತಾಲೂಕಿನ ರಾಜಹಂಸಗಡದಲ್ಲಿ ನಿರ್ಮಾಣ ಮಾಡಲಾಗಿರುವ ಬೃಹತ್ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಶಿವಾಜಿ ಮಹಾರಾಜರ ಸಂಸ್ಥಾನದಲ್ಲಿ ರಾಜರಿಗೆ ಪಟ್ಟಾಭಿಷೇಕ ಮಾಡುವ ಮಾದರಿಯಲ್ಲಿ ಕೇಸರಿ ಪರದೆಯನ್ನು ತೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,
ಎರಡೂ ಚುನಾವಣೆಯಲ್ಲಿ ಸೋಲು ಕಂಡರೂ ನಾನು 2018ರಲ್ಲಿ ನಿಮಗೆ ಮನವಿ ಮಾಡಿಕೊಂಡಿದ್ದೆ. ನಮ್ಮೆಲ್ಲರ ಮಗಳಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ. ದೈರ್ಯಕ್ಕೆ ಹೆಬ್ಬಾಳ್ಕರ್ ಕಡಿಮೆ ಇಲ್ಲ. ಇವತ್ತು ನಾನು ಭಾವಕಳಾಗಿದ್ದೇನೆ ಎಂದರು.
LIVE : ಐತಿಹಾಸಿಕ ರಾಜಹಂಸಗಡದಲ್ಲಿ ನಡೆಯುತ್ತಿರುವ ಭವ್ಯ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಸಮಾರಂಭದ ನಿಮಿತ್ತ ಆಯೋಜಿಸಿರುವ ಲೇಸರ್ ಶೋ, ಕ್ರ್ಯಾಕರ್ ಶೋ ಮತ್ತಿತರ ಕಾರ್ಯಕ್ರಮಗಳ ನೇರ ಪ್ರಸಾರ
Laxmi Hebbalkar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮಾರ್ಚ್ 5, 2023
ಕೊಡಬಾರದಷ್ಟು ಕಷ್ಟ ಕೊಡುತ್ತಿದ್ದಾರೆ ನನಗೆ. ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪನೆ ಮಾಡುವ ಉದ್ದೇಶದಿಂದ ಬಿಜೆಪಿ ಸರಕಾರ ನನ್ನ ಮೇಲೆ ಎರಡೂ ಪ್ರಕರಣ ಹಾಕಿದ್ದಾರೆ. ಸತ್ಯ ಮೇವ ಜಯತೆ ಎಂದು ಕೆಲಸ ಮಾಡಿದೆ.ಬೇರೆ ಕಡೆಯವರು ಬಂದು ಗ್ರಾಮೀಣ ಮತಕ್ಷೇತ್ರದಲ್ಲಿ ಶಿಷ್ಟಾಚಾರದ ಪ್ರಕಾರ ಮೂರ್ತಿ ಉದ್ಘಾಟನೆ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಿಶಾಬುಲ್ ಮಾಡಿ ಮೂರ್ತಿ ಪೂರ್ಣವಾಗಿದಿಲ್ಲ. ಅವರನ್ನು ಕರೆಸಿ ಉದ್ಘಾಟನೆ ಮಾಡಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲು ಬಂದಾಗ ಮೂರ್ತಿಗೆ ಬಣ್ಣ ಹಚ್ಚಲು ತಂದ ಸಾಮಗ್ರಿಗಳು ಮೂರ್ತಿಯ ಪಕ್ಕದಲ್ಲೇ ಇದ್ದರೂ ಉದ್ಘಾಟನೆ ಮಾಡಿಸಿ ಶಿವಾಜಿ ಮಹಾರಾಜರಿಗೆ ಅಪಮಾನ ಮಾಡಿ ರಾಜಕಾರಣ ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ಗೋಕಾಕ ಶಾಸಕರು, ಮಾಜಿ ಶಾಸಕ ಸಂಜಯ ಪಾಟೀಲ ತರಾತುರಿಯಲ್ಲಿ ಮುಖ್ಯಮಂತ್ರಿಯನ್ನು ಕರೆಸಿ ಉದ್ಘಾಟನೆ ಮಾಡಿಸಿ ಇಲ್ಲಿ ಮತ್ತೆ ಬಂದು ನೋಡಲಿಲ್ಲ ಎಂದರು.
ಛತ್ರಪತಿ ಶಿವಾಜಿ ಮಹಾರಾಜರು ಮಹಿಳೆಯರಿಗೆ ಸಾಕಷ್ಟು ಗೌರವ ಕೊಡುತ್ತಿದ್ದರು. ಮಹಿಳೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಅವರು ಶಿವ ಭಕ್ತರು ಎನ್ನುತ್ತಾರೆ. ಅವರು ಶಿವ ಭಕ್ತರಲ್ಲ ಡೋಂಗಿ ಶಿವ ಭಕ್ತರು ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೇವರನ್ನು ಮುಂದೆ ಇಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ. ನನ್ನ ದೇವರು ಗ್ರಾಮೀಣ ಮತಕ್ಷೇತ್ರದ ಜನರು. ಇಂಥ ಪುಣ್ಯದ ಕೆಲಸ ಮಾಡಲು ನೀವು ನನಗೆ ಮಾಡಿಕೊಟ್ಟಿದ್ದು ನನಗೆ ಶಕ್ತಿ ನೀಡಿದೆ ಎಂದರು.
ಎರಡೂ ತಿಂಗಳಲ್ಲಿ ಚುನಾವಣೆ ಬರಲಿದೆ. ಚುನಾವಣೆಯ ಸಲುವಾಗಿ ನಾನು ಇದನ್ನು ಈಗ ಉದ್ಘಾಟನೆ ಮಾಡುತ್ತಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಇದು ವಿಳಂಬವಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಮತಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ಲಾತೂರ್ ಶಾಸಕ ಧೀರಜ್ ದೇಶಮುಖ ಮಾತನಾಡಿ, ಐತಿಹಾಸಿಕ ಶಿವಾಜಿ ಮೂರ್ತಿ ಉದ್ಘಾಟನೆ ಮಾಡಿರುವುದು ಐತಿಹಾಸಿಕ ಕ್ಷಣ. ಬೆಳಗಾವಿ ಗ್ರಾಮೀಣದಲ್ಲಿ ಮಹಿಳಾ ಶಕ್ತಿಯಿಂದ ಈ ಬೃಹತ್ ಮೂರ್ತಿ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಡಿ.ಕೆ.ಶಿವಕುಮಾರ ಅವರು ಆ ಸಮಯದಲ್ಲಿ ರಾಜಹಂಸಗಡದಲ್ಲಿ ಬೃಹತ್ ಶಿವಾಜಿ ಮೂರ್ತಿ ನಿರ್ಮಾಣ ಮಾಡಲು ಅನುದಾನ ನೀಡಿ ಚಾಲನೆ ನೀಡಿದರು. ಅದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ಆ ಮೂರ್ತಿಯನ್ನು ನಿರ್ಮಾಣ ಮಾಡಿ ಸಾಕಾರಗೊಳಿಸಿದ್ದಾರೆ ಎಂದರು.
ಸರಕಾರ ಬರುತ್ತದೆ ಹೋಗುತ್ತದೆ. ಆದರೆ ಶಾಸಕರು ಮಾಡಿದ ಕೆಲಸ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಜನರ ಕನಸು ನನಸು ಮಾಡಿದ ಶ್ರೇಯ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಲ್ಲುತ್ತದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದು ಜನರ ಭಾವನೆಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಎಂದರು.
ಕೊಲ್ಲಾಪುರ ಕಾಂಗ್ರೆಸ್ ಶಾಸಕ ಸತೇಜ್ ಪಾಟೀಲ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಅತ್ಯಂತ ದಿವ್ಯ ಭವ್ಯ ಮೂರ್ತಿಯನ್ನು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಹೆಬ್ಬಾಳ್ಕರ್ ಅವರು ಮಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೆ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡದೆ ಇರುವುದು ವಿಪರ್ಯಾಸದ ಸಂಗತಿ ಎಂದರು.
ಕಳೆದ 2018 ರಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮೀಣ ಭಾಗದ ಜನರಿಗೆ ಭರವಸೆ ನೀಡಿದ್ದರು. ಅದರಂತೆ ನುಡಿದಂತೆ ನಡೆದಿದ್ದಾರೆ. ಶಿವಾಜಿ ಮೂರ್ತಿ ಸ್ಥಾಪನೆ ಮಾಡಿ ಶಿವ ಭಕ್ತರ ಆಶೀರ್ವಾದ ಸದಾ ಅವರ ಮೇಲೆ ಇರುತ್ತದೆ. ರಾಜಹಂಸಗಡದಲ್ಲಿ ಮೊದಲು ಸುಸಜ್ಜಿತ ರಸ್ತೆ ಇರಲಿಲ್ಲ. ಅದನ್ನು ಮಾಡಿದ ಶ್ರೇಯ ಹೆಬ್ಬಾಳ್ಕರ್ ಅವರಿಗೆ ಸಲ್ಲುತ್ತದೆ. ಯಾರು ಎಷ್ಟೇ ವಿರೋಧ ಮಾಡಿದರೂ ಹೆಬ್ಬಾಳ್ಕರ್ ಅವರು ಮಾಡಿದ ಕಾರ್ಯ ಅನನ್ಯ ಎಂದರು.
ಕಳೆದ ಕೆಲ ದಿನಗಳ ಹಿಂದೆ ಕಾರ್ಯಕ್ರಮ ಮಾಡಿದರು. ಅದಕ್ಕೆ ಯಾವುದೇ ವಿರೋಧ ಮಾಡುವುದಿಲ್ಲ. ಆದರೆ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರನ್ನು ಆಹ್ವಾನಿಸಿ ಲೋಕಾರ್ಪಣೆ ಮಾಡಿದ್ದು ಬೃಹತ್ ಶಿವಾಜಿ ಮೂರ್ತಿಗೆ ಕಳೆ ಬಂದಿದೆ ಎಂದರು.











