
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ಭದ್ರತೆಯ ಕೊರತೆ ಇದೆ; ಎಂ.ಬಿ.ಜಿರಲಿ
- shivaraj bandigi
- 21 Apr 2024 , 12:54 PM
- Belagavi
- 192
ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ಭದ್ರತೆಯ ಕೊರತೆ ಎತ್ತಿ ತೋರುತಿದೆ. ಮಹಿಳೆಯರ ರಕ್ಷಣೆ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಜೆಪಿ ವಕ್ತಾರ ಮಾರುತಿ ಜಿರಲಿ ಹೇಳಿದರು. ಮಹಾವೀರ ಜಯಂತಿ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೃತ್ಯವನ್ನು ಖಂಡಿಸಿದರು. ರಾಜ್ಯದ ಮಹಿಳಾ ಭದ್ರತೆಯ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಜೀರಲಿ ಹೇಳಿದರು ಈ ಸಂದರ್ಭದಲ್ಲಿ ಮಂಗಲಾ ಅಂಗಡಿ, ಅಭಯ ಪಾಟೀಲ, ಅನಿಲ್ ಬೆನಕೆ, ಸಂಜಯ್ ಪಾಟೀಲ್, ಸವಿತಾ ಕಾಂಬಳೆ, ಹನುಮಂತ ಕೋಂಗನಳ್ಳಿ ಸೇರಿದಂತೆ ಇತರರು ಉಪ್ಥಿತರಿದ್ದರು.

