ಶ್ರೀ ಧರ್ಮಸ್ಥಳ ಮಂಜುನಾಥ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು

Listen News

ಅಥಣಿ : ತಾಲೂಕಿನ ಹಲ್ಯಾಳ ಗ್ರಾಮದ ಶ್ರೀ ಬ್ರಹ್ಮದೇವ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸಂಘದ ವಿಪತ್ತು ಶೌರ್ಯ ತಂಡದ ವತಿಯಿಂದ ಬ್ರಹ್ಮದೇವರ ದೇವಸ್ಥಾನದ ಆವರಣದಲ್ಲಿ ವಿಶ್ವ ಪರಿಸರ ದಿನಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಲಾಯಿತು 

Your Image Ad

 ಸಂಘದ ವಿಪತ್ತು ತಂಡದ ಸದ್ಯಸರು ಸೇರಿ ಬ್ರಹ್ಮದೇವರ ದೇವಸ್ಥಾನವನ್ನು ಸ್ವಚ್ಛಗೊಳಿಸಿದರು 

Your Image Ad

ಇದೆ ವೇಳೆ ಮಾತನಾಡಿದ ಸದಾಶಿವ ಕಾಂಬಳೆ ಪರಿಸರ ರಕ್ಷಣೆಯು ನಮ್ಮೆಲ್ಲರ ಕರ್ತವ್ಯವಾಗಿದೆ ದಿನೇ ದಿನೇ ಅರಣ್ಯ ನಾಶವಾಗುತ್ತಿರುವುದರಿಂದ ಅತಿಯಾದ ಉಷ್ಣತೆ. ನದಿಯಲ್ಲಿ ನೀರಿನ ಕೊರತೆ. ಶುದ್ಧವಾದ ಗಾಳಿಯ ಕೊರತೆ. ಮುಂತಾದ ತೊಂದರೆಗಳನ್ನು ನಾವೆಲ್ಲರೂ ಅನುಭವಿಸಬೇಕಾಗುತ್ತದೆ ಇಂದಿನ ಯುವ ಜನಾಂಗವು ಒಂದು ದೃಢ ನಿರ್ಧಾರ ಮಾಡಬೇಕಿದೆ ಮೂರರಿಂದ ನಾಲ್ಕು ಗಿಡಗಳನ್ನು ನೆಟ್ಟು ಅವುಗನ್ನು ಸಂರಕ್ಷಿಸಬೇಕು ಹೀಗೆ ಮಾಡುವುದರಿಂದ ಮುಂದಿನ ಜನಾಂಗಕ್ಕೆ ಒಂದುಉತ್ತಮ ಪರಿಸರವನ್ನು ನೀಡಲು ಸಾಧ್ಯವಾಗಿದೆ ಎಂದರು 

 ಇದೇ ಸಂದರ್ಭದಲ್ಲಿ ಕೃಷಿ ಯೋಜನಾಧಿಕಾರಿಯಾದ ಶಿವನಗೌಡ ಪಾಟೀಲ. ಶಾಂತಾ ಪೂಜಾರಿ ಯೋಜನಾ ಸಂಯೋಜಕರು ಜಗದೀಶ್ ಬನಸೋಡೆ. ಸದಾಶಿವ್ ಕಾಂಬಳೆ. ಉಮೇಶ್ ಮಾದರ. ಇಂದ್ರವ್ವ ಕುರಣಿ. ಸುವರ್ಣ ನಾಯಿಕ. ಅವ್ವಕ್ಕ ಕಾಂಬಳೆ. ಹಾಗೂ ಗ್ರಾಮದ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ವರದಿ :  ರಾಹುಲ್  ಮಾದರ

Read More Articles