ಅದ್ದೂರಿ ಹುಡುಗ (ಶಿವ)ನ ಜಬರದಸ್ತ ಪೊಗರುಗೆ ಭರ್ಜರಿ ಕಲೆಕ್ಷನ್...

ಬೆಂಗಳೂರು : ಮೂರು ವರ್ಷಗಳ ನಿರಂತರ ಪರಿಶ್ರಮದಿಂದ ಮೂಡಿ ಬಂದ ಪೊಗರು ಸಿನಿಮಾ ಅದ್ದೂರಿಯಾಗಿ ಶುಕ್ರವಾರ ರಿಲೀಸ್​ ಆಗಿದೆ. ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ರವಿ ಶಂಕರ್​, ಪವಿತ್ರಾ ಲೋಕೇಶ್, ಸಂಪತ್​ ರಾಜ್​, ಡಾಲಿ ಧನಂಜಯ್​, ಚಿಕ್ಕಣ್ಣ, ಕುರಿ ಪ್ರತಾಪ್​, ಮಯೂರಿ, ನಿರ್ದೇಶಕ ನಂದ ಕಿಶೋರ್ ಪೊಗರಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಧ್ರುವ ಸರ್ಜಾ ನಟನೆಯ ಅದ್ದೂರಿ, ಬಹದ್ದೂರ್​, ಭರ್ಜರಿ..

promotions
logintomyvoice

ಈ ಮೂರು ಚಿತ್ರಗಳಲ್ಲಿ ಹೈಲೈಟ್​ ಆಗಿದ್ದು ಮಾಸ್​ ಅಂಶಗಳು. ಈ ಮೂರು ಚಿತ್ರಗಳದ್ದು ಒಂದೇ ರೀತಿಯ ಪ್ಯಾಟರ್ನ್​​ ಇತ್ತು. ಈಗ ರಿಲೀಸ್​ ಆಗಿರುವ ‘ಪೊಗರು’ ಸಿನಿಮಾ ಮೂಲಕ ಧ್ರುವ ಸರ್ಜಾ ಈ ಪ್ಯಾಟರ್ನ್​​ಅನ್ನು ಬ್ರೇಕ್​ ಮಾಡಿದ್ದಾರೆ. ಶಿವನಿಗೆ (ಧ್ರುವ ಸರ್ಜಾ) ಅಪ್ಪ-ಅಮ್ಮ ಎಂದರೆ ಪಂಚಪ್ರಾಣ. ಆದರೆ, ಒಂದು ದಿನ ಏಕಾಏಕಿ ಶಿವನ ಅಪ್ಪನನ್ನು ರೌಡಿಗಳು ಹತ್ಯೆ ಮಾಡಿ ಬಿಡುತ್ತಾರೆ.

promotions

ಈ ವಿಚಾರ 10 ವರ್ಷಗಳ ನಂತರ ಶಿವನಿಗೆ ತಿಳಿಯುತ್ತದೆ. ಅಷ್ಟೇ ಅಲ್ಲ, ಆಗ ನಡೆಯುವ ಕೆಲ ಘಟನೆಗಳಿಂದ ಶಿವ ಸಂಪೂರ್ಣವಾಗಿ ಬದಲಾಗುತ್ತಾನೆ. ಸಂಪೂರ್ಣ ಚಿತ್ತ ಥೆಟರ್ ಗೆ ತೆರಳಿ ನೋಡಿ ಆನಂದಿಸಿ.

Read More Articles