ಬಾ... ಬಾ...ಬಾ.. ನಾ ರಡಿ...: ಭರ್ಜರಿ ಪ್ರದರ್ಶನ ಕಾಣುತ್ತಿರುವ ಡಿ ಬಾಸ್ ಸಿನಿಮಾ
- 15 Jan 2024 , 12:45 AM
- Belagavi
- 180
ಬೆಳಗಾವಿ : ನಟ ದರ್ಶನ ಅಭಿನಯದ ರಾಬರ್ಟ್ ಸಿನಿಮಾಗೆ ಗುರುವಾರ ಬೆಳಗಾವಿ ಸೇರಿದಂತೆ ದೇಶಾದ್ಯಂತ ಬಿಡುಗಡೆಯಾಗಿದ್ದು, ಒಂದೇ ದಿನ 1596 ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ.
ಈ ಮೂಲಕ ಲಾಕ್‌ಡೌನ್ ಬಳಿಕ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರುವ ಪ್ರಮುಖ ಸಿನಿಮಾ ರಾಬರ್ಟ್ ಆಗಿದ್ದು, ಕರ್ನಾಟಕದಲ್ಲಿ ಮೊದಲ ದಿನವೇ ಭರ್ಜರಿ ಪ್ರದರ್ಶನ ಕಂಡಿದೆ. ಆಂದ್ರ ಪ್ರದೇಶದಲ್ಲಿ 433, ತೆಲಂಗಾಣದಲ್ಲಿ 407 ಚಿತ್ರ ಮಂದಿರಗಳಲ್ಲಿ ರಾರ್ಬಟ್ ತೆರೆ ಕಂಡಿದೆ.
ರಾಜ್ಯದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಒಂದೆಡೆಯಾದರೆ ಡಿ ಬಾಸ್ ಅಭಿಮಾನಿಗಳಿಗೆ ರಾಬರ್ಟ್ ಹಬ್ಬದ ಸಡಗರ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇಂದು ಅದ್ದೂರಿಯಾಗಿ ತೆರೆಗೆ ಬಂದಿದ್ದು, ಈಗಾಗಲೇ ಜಿಲ್ಲೆಯ ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆಯಿಂದಲೇ ರಾಬರ್ಟ್ ಅದ್ದೂರಿ ಪ್ರದರ್ಶನ ಕಾಣುತ್ತಿದೆ.
ರಾಬರ್ಟ್ ನೋಡಲು ಡಿ ಬಾಸ್ ಅಭಿಮಾನಿಗಳು ಬೆಳ್ಳಂಬೆಳಗ್ಗೆ ಚಿತ್ರಮಂದಿರದ ಮುಂದೆ ಮುಗಿಬಿದ್ದಿದ್ದರು. ಜಿಲ್ಲೆಯ ಗಂಗಾವತಿ ನಗರದ ಚಂದ್ರಹಾಸ ಚಿತ್ರಮಂದಿರದಲ್ಲಿ ಬೆಳಿಗ್ಗೆ ಗೇಟ್ ನ್ನು ದರ್ಶನ್ ಅಭಿಮಾನಿಗಳು ಕಲ್ಲಿನಿಂದ ಒಡೆದು ರೌಡಿಜಂ ತೋರಿಸಿದ್ದು ಕಂಡು ಬಂತು, ಥಿಯೇಟರ್ ನ ಮುಂಭಾಗದ ಶೇಟ್ರಸ್ ನು ಕಲ್ಲಿನಿಂದ ಹೊಡೆದು ಅತೀರೆಕ ದಿಂದ ವರ್ತಿಸಿದ್ದು ಥಿಯೇಟರ್ ಮಾಲೀಕರು ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಕೊಪ್ಪಳ ನಗರದ ಚಿತ್ರಮಂದಿರ ಸೇರಿದಂತೆ ಜಿಲ್ಲೆಯ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇಂದು ಅನೇಕರು ಟಿಕೆಟ್ ಸಿಗದೆ ಪರದಾಡುತ್ತಿದ್ದಾರೆ.