ಪುನೀತ್ ಅಭಿಮಾನಿಗಳಿಗೆ ಲಾಠಿ ರುಚಿ

ಬೆಳಗಾವಿ :ಯುವರತ್ನ ಸಿನಿಮಾ ಪ್ರಮೋಷನ್ ಗಾಗಿ ಬೆಳಗಾವಿಗೆ ಬಂದಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ, ಧನಂಜಯ ಡಾಲಿ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

Your Image Ad

ಬೆಳಗಾವಿಯ ಚಂದನ (ಐನಾಕ್ಸ್ ) ಚಿತ್ರಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದ ಯುವರತ್ನ ಪ್ರಮೋಷನ್ ಗಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಧನಂಜಯ ಡಾಲಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಕಲಾವಿದರನ್ನು ನೋಡಲು ಅಭಿಮಾನಿಗಳು ಮಳೆಯನ್ನು ಲೆಕ್ಕಿಸದೆ ನೆಚ್ಚಿನ ನಟನನ್ನು ನೋಡಲು ಮುಗಿ ಬಿದ್ದರು.

Your Image Ad

ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

Your Image Ad

ಇದರ ನಡುವೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ, ಜೈ ಕರ್ನಾಟಕ, ಜೈ ಬೆಳಗಾವಿ ಎಂದು ಹೇಳುತ್ತಿದ್ದಂತೆ ಅಭಿಮಾನಿಗಳು ಕೇಕೆ ಹಾಕಿದರು. ಎಲ್ಲರೂ ಮಾಸ್ಕ ಧರಿಸಿ ಮೇ 1ಕ್ಕೆ ಯುವರತ್ನ ತೆರೆಯ ಮೇಲೆ ಬರಲಿ ದೆ ಎಲ್ಲರೂ ನೋಡಿ ಎಂದು ವಿನಂತಿಕೊಂಡರು.

Your Image Ad

Read More Articles