ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ : ಕೋರೋನಾ ಆತಂಕವನ್ನು ದೂರದಿ ಸರಿಸಿ ಮನೋಧೈರ್ಯವೇ ನಿಮ್ಮಯ ಶಕ್ತಿ..!
- 15 Jan 2024 , 1:32 AM
- Davanagere
- 140
ಧೈರ್ಯಂ ಸರ್ವರ್ತ ಸಾಧನಂ
ಭವಿತವ್ಯದ ಸತ್ವ ಪರೀಕ್ಷೆ
ಸವಾಲಿನೊಡನೆ ನಿರೀಕ್ಷೆ
ಎದುರಿಸಲೇಬೇಕಾದ ಶಿಕ್ಷೆ
ಧನಾತ್ಮಕವಾಗಿರಲಿ ಪ್ರತೀಕ್ಷೆ !
ಹಂತ ಹಂತದಲೂ ಸವಾಲು
ದಿಟ್ಟತನದಲ್ಲಿರಲಿ ಪ್ರತಿ ಸಾಲು
ಅಂತರ- ಅಂತರ ಕಾಪಾಡಿಕೊಳ್ಳಿ
ಭಾವುಕತೆಯನು ಮೆಟ್ಟಿ ನಿಲ್ಲಿರಿ.!
ಸಾಹಸದಲ್ಲಡಗಿದ ಸವಾಲಿನಲ್ಲಿ
ಮಾಸ್ಕ್,ಸ್ಯಾನಿಟೈಸರ್ ಜೊತೆಗಿರಲಿ
ಆತಂಕವನ್ನೇಲ್ಲಾ ದೂರದಿ ಸರಿಸಿ
ಪ್ರಶ್ನೆಗಳಿಗೆಲ್ಲಾ ಉತ್ತರ ಸುರಿಸಿ .!!
ಮನೋಧೈರ್ಯವೇ ನಿಮ್ಮಯ ಶಕ್ತಿ
ಅದರ ಮೇಲಿರಲಿ ನಿಮ್ಮಯ ಭಕ್ತಿ
ಸವಾಲಿನ ಈ ಮಹಾ ಪರೀಕ್ಷೆಯಲ್ಲಿ
ಸಾಹಸದಲ್ಲಿ ನಿಮಗೆ ಜಯವಿರಲಿ.!!
ಗುಂಪು ಗುಂಪಾಗಿ ಚರ್ಚಿಸದಿರಿ
ಮನೆಯ ದಾರಿಯೆಡೆ ಸಾಗಿರಿ
ಜಳಕವನ್ನು ಕೂಡಲೇ ಮಾಡಿರಿ
ನಿರಾಳತೆಯಲ್ಲಿ ವಿರಮಿಸಿ, ಓದಿರಿ.
ರಚನೆ: ವೀಣಾ ಕೃಷ್ಣಮೂರ್ತಿ,
ದಾವಣಗೆರೆ.
ಭವಿತವ್ಯದ ಸತ್ವ ಪರೀಕ್ಷೆ
ಸವಾಲಿನೊಡನೆ ನಿರೀಕ್ಷೆ
ಎದುರಿಸಲೇಬೇಕಾದ ಶಿಕ್ಷೆ
ಧನಾತ್ಮಕವಾಗಿರಲಿ ಪ್ರತೀಕ್ಷೆ !
ಹಂತ ಹಂತದಲೂ ಸವಾಲು
ದಿಟ್ಟತನದಲ್ಲಿರಲಿ ಪ್ರತಿ ಸಾಲು
ಅಂತರ- ಅಂತರ ಕಾಪಾಡಿಕೊಳ್ಳಿ
ಭಾವುಕತೆಯನು ಮೆಟ್ಟಿ ನಿಲ್ಲಿರಿ.!
ಸಾಹಸದಲ್ಲಡಗಿದ ಸವಾಲಿನಲ್ಲಿ
ಮಾಸ್ಕ್,ಸ್ಯಾನಿಟೈಸರ್ ಜೊತೆಗಿರಲಿ
ಆತಂಕವನ್ನೇಲ್ಲಾ ದೂರದಿ ಸರಿಸಿ
ಪ್ರಶ್ನೆಗಳಿಗೆಲ್ಲಾ ಉತ್ತರ ಸುರಿಸಿ .!!
ಮನೋಧೈರ್ಯವೇ ನಿಮ್ಮಯ ಶಕ್ತಿ
ಅದರ ಮೇಲಿರಲಿ ನಿಮ್ಮಯ ಭಕ್ತಿ
ಸವಾಲಿನ ಈ ಮಹಾ ಪರೀಕ್ಷೆಯಲ್ಲಿ
ಸಾಹಸದಲ್ಲಿ ನಿಮಗೆ ಜಯವಿರಲಿ.!!
ಗುಂಪು ಗುಂಪಾಗಿ ಚರ್ಚಿಸದಿರಿ
ಮನೆಯ ದಾರಿಯೆಡೆ ಸಾಗಿರಿ
ಜಳಕವನ್ನು ಕೂಡಲೇ ಮಾಡಿರಿ
ನಿರಾಳತೆಯಲ್ಲಿ ವಿರಮಿಸಿ, ಓದಿರಿ.
ರಚನೆ: ವೀಣಾ ಕೃಷ್ಣಮೂರ್ತಿ,
ದಾವಣಗೆರೆ.