ಡಾ.ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಆಗಸ್ಟ್ ನಲ್ಲಿ ರಿಲೀಸ್ ಸಾಧ್ಯತೆ
- 15 Jan 2024 , 3:42 AM
- Bengaluru
- 195
ಲಾಕ್ ಡೌನ್ ನಿಧಾನವಾಗಿ ತೆರವಾಗುತ್ತಿರುವ ಬೆನ್ನಲ್ಲೇ ಹಲವು ಸಿನಿಮಾ ತಯಾರಕರು ತಮ್ಮ ಚಿತ್ರಗಳ ಶೂಟಿಂಗ್ ಪೂರ್ಣಗೊಳಿಸಲು ಮುಂದಾಗಿದ್ದಾರೆ.
ಎ ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾ ಶೇ.60 ರಷ್ಟು ಪೂರ್ಣಗೊಂಡಿದ್ದು ಚಿತ್ರದ ಶೂಟಿಂಗ್ ಮುಂದುವರಿಸಲು ತಯಾರಾಗಿದ್ದಾರೆ.
ಇಂದಿನಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದು ಉಳಿದ ಶೇ.40 ರಷ್ಟು ಶೂಟಿಂಗ್ ಪೂರ್ಣಗೊಳಿಸಲಿದ್ದೇವೆ, ಸಂಗೀತ್ ನಿರ್ದೇಶಕ ಅರ್ಜುನ್ ಜನ್ಯ ಜೊತೆಗೂಡಿ ಕೆಲಸ ಪುನಾರಂಭಿಸಲಿದ್ದೇವೆ ಎಂದು ನಿರ್ದೇಶಕ ಹರ್ಷ ತಿಳಿಸಿದ್ದಾರೆಇಂದಿನಿಂದ ಸಿನಿಮಾದ ರಿ ರೆಕಾರ್ಡಿಂಗ್ ಆರಂಭವಾಗಲಿದ್ದು, ಮೊದಲ ಕಾಪಿ ಹೊರಬರಲಿದೆ. ಭಜರಂಗಿ ಸಿನಿಮಾವನ್ನು ಜಯಣ್ಣ ನಿರ್ಮಿಸುತ್ತಿದ್ದಾರೆ.
ಆಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದ್ದು, ನಿರ್ಮಾಪಕರಾದ ಜಯಣ್ಣ-ಬೋಗೇಂದ್ರ ಸಿನಿಮಾ ಬಿಡುಗಡೆ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಸರ್ಕಾರ ಥಿಯೇಟರ್ ಗಳಲ್ಲಿ ಶೇ.100 ರಷ್ಟು ಸೀಟಿಗೆ ಅನುಮತಿ ನೀಡುತ್ತದೆಯೇ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಭಜರಂಗಿ ಕಮರ್ಷಿಯಲ್ ಸಿನಿಮಾವಾಗಿದ್ದು, ಥಿಯೇಟರ್ ನಲ್ಲಿ ರಿಲೀಸ್ ಆಗುವ ಮೊದಲ ಸಿನಿಮಾ ವಾಗುವ ಸಾಧ್ಯತೆಯಿದೆ.
ಶಿವರಾಜ್ ಕುಮಾರ್- ಹರ್ಷ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು ವಜ್ರಕಾಯ, ಭಜರಂಗಿ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈ ಇಬ್ಬರು ವೇದ ಎಂಬ ಮತ್ತೊಂದು ಸಿನಿಮಾಗಾಗಿ 4ನೇ ಬಾರಿ ಜೊತೆಯಾಗುತ್ತಿದ್ದಾರೆ.
ವೇದ ಸಿನಿಮಾ ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾವಾಗಲಿದೆ, ಭಜರಂಗಿ-1 ಸಿನಿಮಾದಲ್ಲಿ ಶಿವಣ್ಣನಿಗೆ ಭಾವನಾ ನಾಯಕಿಯಾಗಿದ್ದಾರೆ, ಶೃತಿ, ಲೋಕಿ, ಚೆಲುವರಾಜ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.