ಮಿಲ್ಟನ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೋಳ್ಳಲಿದ್ದಾರೆ ಶಿವಣ್ಣ
- 15 Jan 2024 , 6:12 AM
- Bengaluru
- 154
ಬೆಂಗಳೂರು:ವಿಜಯ್ ಮಿಲ್ಟನ್ ನಿರ್ದೇಶದ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟಿಸುತ್ತಿದ್ದು, ಜೂನ್ 28 ರಿಂದ ಶೂಟಿಂಗ್ ಆರಂಭವಾಗಲಿದೆ.
ಶಿವಪ್ಪ ಎಂಬ ಟೈಟಲ್ ಇಡಲಾಗಿದ್ದು, ಚಿತ್ರತಂಡ ಈಗಾಗಲೇ ಟಾಕೀ ಪೋರ್ಸನ್ ಪೂರ್ಣಗೊಳಿಸಿದ್ದು, ಉಳಿದ ಭಾಗದ ಶೂಟಿಂಗ್ ಗಾಗಿ ಚಿತ್ರ ತಂಡ ನಿರ್ಧರಿಸಿದೆ. ಎರಡು ಹಾಡು ಹಾಗೂ ಮೇಜರ್ ಫೈಟ್ ಸನ್ನಿವೇಶ ಸೇರಿದಂತೆ 20 ನಿಮಿಷದ ಚಿತ್ರೀಕರಣ ಬಾಕಿಯಿದೆ.
ಹೊರಾಂಗಣ ಚಿತ್ರೀಕರಣಕ್ಕೆ ಸದ್ಯ ಸರ್ಕಾರ ಅನುಮತಿ ನೀಡಿದ್ದು, ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಶೂಟಿಂಗ್ ನಡೆಸಲಾಗುವುದು ಎಂದು ನಿರ್ಮಾಪಕ ಕೃಷ್ಣ ಸಾರ್ಥಕ್ ತಿಳಿಸಿದ್ದಾರೆ. ಉಳಿದ ಎರಡು ಪೈಟಿಂಗ್ ಸನ್ನಿವೇಶಗಳಿಗಾಗಿ ಸೆಟ್ ನಿರ್ಮಾಣ ಮಾಡಲಾಗುತ್ತಿದೆ.
ಜುಲೈ 12 ರಂದು ಶಿವರಾಜ್ ಕುಮಾರ್ ಹುಟ್ಟುಹಬ್ಬವಿದ್ದು, ಅಂದೇ ಅಧಿಕೃತವಾಗಿ ಅಂತಿಮ ಟೈಟಲ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಅದೇ ದಿನ ಸಿನಿಮಾದ ಫರ್ಸ್ಟ್ ಲುಕ್ ರಿವೀಲ್ ಆಗಲಿದೆ.
ತಮ್ಮ ಸಿನಿಮಾ ತಂಡದ ಸಿಬ್ಬಂದಿಗೆ ಲಸಿಕೆ ಹಾಕಿಸುವಲ್ಲಿ ಕೃಷ್ಣ ಕೆಲಸ ಮಾಡುತ್ತಿದ್ದು, ಸೆಟ್ ಗಳಿಗೆ ಯಾರೂ ಪ್ರವೇಶಿಸುತ್ತಾರೋ ಅವರು ಮೊದಲ ಹಂತದ ಲಸಿಕೆ ಪಡೆದಿದ್ದು, ಅದರ ಪ್ರಮಾಣ ಪತ್ರ ತೋರಿಸಬೇಕು ಎಂದು ಹೇಳಿದ್ದಾರೆ.
ತಮಿಳಿನಲ್ಲಿ ಗೋಲಿ ಸೋಡಾ 1 ಮತ್ತು 2 ಸಿನಿಮಾ ನಿರ್ದೇಶನ ಮಾಡಿರುವ ವಿಜಯ್ ಕೃಷ್ಣ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಶಿವಣ್ಣನ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದು ಶಿವರಾಜ್ ಕುಮಾರ್ ಅವರ 123ನೇ ಸಿನಿಮಾ ಆಗಲಿದೆ.
ಈ ಸಿನಿಮಾಗೆ ಅನೂಪ್ ಸಿಳೀನ್ ಸಂಗೀತ್ ನೀಡಿದ್ದು, ಶಿವಣ್ಣ ಮತ್ತು ಡಾಲಿ ಧನಂಜಯ್ ಎರಡನೇ ಬಾರಿಗೆ ಟಗರು ನಂತರ ಒಂದಾಗಿದ್ದಾರೆ. ಅಂಜಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯಶೋ ಶಿವಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಶಶಿಕುಮಾರ್ ಮತ್ತು ಉಮಾಶ್ರಿ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.