ದೂಳೆಬ್ಬಿಸಲು ಸಜ್ಜಾದ ರಾಜಮೌಳೀಯ RRR
- 14 Jan 2024 , 10:33 PM
- Tamilnadu
- 449
ಎಸ್‌ಎಸ್ ರಾಜಮೌಳಿ ಅವರ ಮುಂಬರುವ ಆರ್‌ಆರ್‌ಆರ್ ಚಲನ ಚಿತ್ರದ ಎರಡು ಹಾಡುಗಳನ್ನು ಹೊರತುಪಡಿಸಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಟ್ವಿಟ್ಟರನಲ್ಲಿ ಘೋಷಿಸಿದ್ದಾರೆ.

ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಇಬ್ಬರೂ ಚಲನಚಿತ್ರಕ್ಕಾಗಿ ಡಬ್ಬಿಂಗನ್ನು ಎರಡು ಭಾಷೆಗಳಲ್ಲಿ ಪೂರ್ಣಗೊಳಿಸಿದ್ದಾರೆ ಮತ್ತು ಉಳಿದವುಗಳನ್ನು ಶೀಘ್ರದಲ್ಲೇ ಮುಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಅನ್ನು ಮೂಲತಃ ಈ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನಿಸಿ ಚಲನಚಿತ್ರವು ಮತ್ತೆ ಮುಂದೂಡುವ ಸಾಧ್ಯತೆಯಿದೆ. ಮುಂದಿನ ವರ್ಷ ಸಂಕ್ರಾಂತಿಯಂದು ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.