ಉತ್ತರ ಕರ್ನಾಟಕ ನವ ಪ್ರತಿಭೆಗಳ ಹೊಸ ಪ್ರಯತ್ನ : ವಿಡಿಯೋ ನೋಡಿ ಶುಭ ಹಾರೈಸಿ
- 15 Jan 2024 , 5:01 AM
- Belagavi
- 246
ಬೆಳಗಾವಿ : ಕಲೆಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದಭಾವ ಇಲ್ಲ, ಆದರೆ ಉತ್ತರ ಕರ್ನಾಟಕದಿಂದ ಹೋದ ಪ್ರತಿಭೆಗಳು ದಕ್ಷಿಣ ಕರ್ನಾಟಕದವರ ಕಾಲ್ತುಳಿತಕ್ಕೆ ಸಿಕ್ಕು ಹುದುಗಿ ಹೋಗುತ್ತವೆ ಎಂಬ ಮಾತು ಇದೆ. ಆದರೆ ಉತ್ತರ ಕರ್ನಾಟಕದ ಕಲಾವಿದರು ಇದ್ಯಾವುದಕ್ಕೂ ಕಿವಿಗೋಡದೆ ಆಗಾಗ ಕಿರುಚಿತ್ರ ಕಾಮಿಡಿ ವಿಡಿಯೋಸ್, ಮೇಕಿಂಗ್ ಸಾಂಗ್ಸ್ ಸೇರಿದಂತೆ ಇನ್ನಿತರ ಹೊಸ ಪ್ರಯತ್ನ ಮಾಡುತ್ತಲೇ ಇರುತ್ತಾರೆ.
ಸದ್ಯ ಬೆಳಗಾವಿಯ ಯುವಕರ ಗುಂಪೊಂದು ಟಾಮ್ ಅಂಡ್ ಜೆರ್ರಿ ಚಿತ್ರದ 'ಹಾಯಾಗಿದೆ' ಎಂಬ ಗೀತೆಗೆ ಸ್ವತಃ ಮೇಕಿಂಗ್ ವಿಡಿಯೋ ಮಾಡುವ ಮೂಲಕ ಸ್ಥಳೀಯ ಭಾಗದ ಜನಮನ ಗೆದ್ದಿದ್ದಾರೆ. ಹಾಯಾಗಿದೆ ಮೇಕಿಂಗ್ ವಿಡಿಯೋ ಸಾಂಗ್ ನಲ್ಲಿ ಬೆಳಗಾವಿ ನಿತಿನ್ ಹಾಗೂ ಆರತಿ ರೆಡ್ಡಿ, ಶ್ರೀಕಾಂತ, ಸಿದ್ದಾರ್ಥ್ ಅಭಿನಯಿಸಿದ್ದಾರೆ.
ನವೀನ ಛಬ್ಬಿ ಛಾಯಾಗ್ರಹಣ, ಎಡಿಟ್ ಪ್ಲೇಸ್ ಸಂಸ್ಥೆಯ ಸಂಕಲನ, ಬಣ್ಣ ಶ್ರೆನಿಕರಣ, ಪ್ರಚಾರ ವಿನ್ಯಾಸ ಮಾಡಿದ್ದಾರೆ. ಯಾವುದೇ ನುರಿತ ತಜ್ಞರಿಲ್ಲದಿದ್ದರು ಸ್ವತಃ ತಾವೇ ವಿಡಿಯೋ ಮಾಡಿ ಚಿತ್ರೀಕರಿಸುವ ಮೂಲಕ ಅಚ್ಚುಕಟ್ಟಾಗಿ ಹಾಯಾಗಿದೆ ಕವರ್ ಸಾಂಗನ್ನು ತೆರೆಗೆ ತರುವಲ್ಲಿ ಯುವಕರ ಗುಂಪು ಯಶಸ್ವಿಯಾಗಿದೆ.
ಈ ಹಿಂದೆಯೂ ಸಹ "ಅಮಾಯಕರು" "ಮಂಗಳವಾರ ರಜಾದಿನಾ", "ತಿರುಗಿ ನೋಡಬೇಡ", "ಬೆಳಗಾವಿ ಹುಡುಗರು ಕನ್ನಡ ರಾಪ್"ಕಿರುಚಿತ್ರ ಸೇರಿದಂತೆ ವಿವಿಧ ವಿಡಿಯೋಗಳನ್ನು ಮಾಡಿರುವ ಈ ತಂಡ ಇನ್ನೂ ಅನೇಕ ಕಿರು ಚಿತ್ರಗಳನ್ನು ತೆರೆಗೆ ತರುವ ಮೂಲಕ ಚಿತ್ರರಂಗದಲ್ಲಿ ಉತ್ತುಂಗಕ್ಕೇರುವದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಇಂತಹ ಅನೇಕ ಪ್ರತಿಭೆಗಳು ಅನಾವರಣಗೊಳ್ಳಲಿ ಎಂಬುದು ಲೋಕಲವಿವನ ಆಶಯವಾಗಿದೆ.