ಮೈಸೂರಿನ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರವರ 230ನೇ ಜನ್ಮದಿನದ ಸಂಭ್ರಮ

ಮೈಸೂರು: ಮೈಸೂರಿನ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ (14 ಜುಲೈ 1794 - 27 ಮಾರ್ಚ್ 1868)

Your Image Ad

ಮೈಸೂರಿನ ಇಪ್ಪತ್ತೆರಡನೆಯ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್, 30 ಜೂನ್ 1799 ರಿಂದ 27 ಮಾರ್ಚ್ 1868 ರವರೆಗೆ, ಸುಮಾರು ಎಪ್ಪತ್ತು ವರ್ಷಗಳ ಕಾಲ ರಾಜ್ಯವನ್ನು ಆಳಿದರು. ಅವರ ಆಳ್ವಿಕೆಯ ಅವಧಿಯಲ್ಲಿ ಅವರು ನಾಮಮಾತ್ರದ ಆಡಳಿತಗಾರರಾಗಿದ್ದರೂ, ಕಲೆ ಮತ್ತು ಸಂಗೀತಕ್ಕೆ ನೀಡಿದ ಪ್ರೋತ್ಸಾಹಕ್ಕಾಗಿ ಹೆಸರುವಾಸಿಯಾಗಿದ್ದರು.

Your Image Ad

ಮಹಾರಾಜ ಚಾಮರಾಜ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣಿ ದೇವಿ ದಂಪತಿಗಳ ಪುತ್ರರಾದ ಕೃಷ್ಣರಾಜ ಒಡೆಯರ್, ತಮ್ಮ ದತ್ತು ಅಜ್ಜಿ ಮಹಾರಾಣಿ ಲಕ್ಷ್ಮಿ ದೇವಿ ಮಾರ್ಗದರ್ಶನದಲ್ಲಿ ಬೆಳೆದು ದೊಡ್ಡವರಾದರು. ಅವರು ಸಿಂಹಾಸನಾರೋಹಣ ಮಾಡಿದಾಗ, ತಮ್ಮ ಆಳ್ವಿಕೆಯಲ್ಲಿ ಕನ್ನಡ ಸಾಹಿತ್ಯ, ಸಂಗೀತ ಮತ್ತು ಇತರ ಕಲಾಪ್ರಕಾರಗಳಿಗೆ ಮಹತ್ತರ ಕೊಡುಗೆ ನೀಡಿದರು.

Your Image Ad

ಕನ್ನಡದಲ್ಲಿ 'ಶ್ರೀತತ್ತ್ವನಿಧಿ' ಮತ್ತು 'ಸೌಗಂಧಿಕಾಪರಿಣಯ' ಕೃತಿಗಳನ್ನು ಬರೆದ ಕೃಷ್ಣರಾಜ ಒಡೆಯರ್, ತಮ್ಮ ಆಸ್ಥಾನದಲ್ಲಿ ಅನೇಕ ಗಣ್ಯ ಬರಹಗಾರರನ್ನು ಪ್ರೋತ್ಸಾಹಿಸಿದರು. ಕೆಂಪು ನಾರಾಯಣ, ಯಾದವರ, ಮತ್ತು ಇತರ ಹಲವಾರು ಕನ್ನಡ ಬರಹಗಾರರು ಈ ಅವಧಿಯಲ್ಲಿ ಪ್ರಮುಖ ಕೃತಿಗಳನ್ನು ರಚಿಸಿದರು. 

ಸಂಸ್ಕೃತ, ಕನ್ನಡ, ತಮಿಳು, ಇಂಗ್ಲಿಷ್, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪಾರಂಗತರಾದ ಒಡೆಯರ್, ವೀಣೆಯ ನುಡಿಸಲು ಕೂಡ ಪರಿಣತರು. ಗಂಜಿಫಾ ಆಟವನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಆಳ್ವಿಕೆಯಲ್ಲಿ, ಯಕ್ಷಗಾನದ ಬೆಳವಣಿಗೆ ಮತ್ತು ಉಳಿವಿಗೆ ಮಹತ್ವದ ಕೊಡುಗೆ ನೀಡಿದರು. 

ಮೈಸೂರಿನ ಸಾಂಸ್ಕೃತಿಕ ಮತ್ತು ಕಲಾತ್ಮಕ ಬೆಳವಣಿಗೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ ಕೊಡುಗೆಗಳು, ಇಂದಿಗೂ ಕೂಡ ಅನನ್ಯವಾಗಿದೆ.

Read More Articles