ಸೇವಾ ನಿವೃತ್ತಿಯಾದ ಮಾರುತಿ ಉದ್ದನ್ನವರ ಕಿರು ಚಿತ್ರ ತೆರೆಗೆ

ಬೆಳಗಾವಿ: ದೇಶ ಸೇವೆಯ ಹೊಣೆ ಹೊತ್ತು ಸುಧೀರ್ಘ 30 ವರ್ಷಗಳ ಕಾಲ ಸಿಪಾಯಿ ಹುದ್ದೆಯಿಂದ ಸುಬೇದಾರ ಹಂತದವರೆಗೆ ಬಡ್ತಿ ಪಡೆದು ಆಗಷ್ಟ 31 ರಂದು ನಿವೃತ್ತರಾಗುತ್ತಿಯಾದ ಸುಬೇದಾರ ಮಾರುತಿ ಶಿವಲಿಂಗಪ್ಪ ಉದ್ದನ್ನವರ ಅವರ ಕೀರು ಚಿತ್ರಣ”

promotions
logintomyvoice

ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಸುಬೇದಾರ ಮಾರುತಿ ಉದ್ದನ್ನವರ ಅವರು ತಂದೆ ಶಿವಲಿಂಗಪ್ಪ ತಾಯಿ ಬಾಳವ್ವ ಉದರದಲ್ಲಿ ಜೂನ್ 1 1971 ರಂದು ಖಾನಟ್ಟಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಪ್ರೌಢ ಶಿಕ್ಷಣವನ್ನು ಮೂಡಲಗಿಯ ಎಸ್.ಎಸ್.ಆರ್ ಶಾಲೆಯಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪೂರೈಸಿದರು. ಭೂ ಸೇನೆಗೆ ಸೇರಬೇಕೆಂಬ ಆಕಾಂಕ್ಷೆಯಿಂದ ಶ್ರಮವಹಿಸಿ 1991ರ ಅಗಷ್ಟ 27 ರಂದು ಮದ್ರಾಸ ಇಂಜಿನೀಯರಿಂಗ ಗ್ರುಫ್ಸ್ ನಲ್ಲಿ ನೇಮಕಾತಿಯಾದರು. ಪ್ರಾರಂಭಿಕವಾಗಿ ಬುನಾಧಿ ತರಭೇತಿಯನ್ನು ಎಮ್.ಇ.ಜಿ ಬೆಂಗಳೂರಿನಲ್ಲಿ 1991 ರಿಂದ 1993ರವರೆಗೆ ಪೂರೈಸಿ ಸಿಪಾಯಿಯಾಗಿ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಕರ್ತವ್ಯಕ್ಕೆ ಹಾಜರಾದರು.

promotions
logintomyvoice

ಪ್ರಾಂಭಿಕ ಹಂತದಲ್ಲಿ ಯೌವ್ವನದ ಕಾಲದಲ್ಲಿ ಸಾಕಷ್ಟು ದುಃಖ, ಕಷ್ಟದ ಜೀವನದ ನಡುವೆ ಹೋರಾಟದ ಹಾದಿಯ ಮೂಲಕ ಯಶಸ್ಸು ಗಳಿಸುತ್ತಾ ಬಂದಿದ್ದಾರೆ. ಇವರ ಸೇವಾವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಭದ್ರನಾ, ಉಧಾಮಪೂರ, ಗುಜರಾತಿನ ಬರೂಡಾ, ಅಸ್ಸಾಮನ ತೇಜಪೂರ, ರಾಜಸ್ಥಾನದ ಜೋಧಪೂರ, ತಮಿಳುನಾಡಿನ ದಿಂಡಿಗಲ್‍ನಲ್ಲಿ ಕರ್ತವ್ಯ ನಿರ್ವಹಿಸಿ ಸದ್ಯ ಪಶ್ಚಿಮ ಬಂಗಾಳದ ಕಾಲಿಪಾಂಗ್‍ನಿಂದ ನಿವೃತ್ತರಾಗಿದ್ದಾರೆ. ಸೇವಾವಧಿಯಲ್ಲಿ ಸಾಕಷ್ಟು ಬಾರಿ ಉಗ್ರರ ನಿಗ್ರಹ ದಳ, ಉಗ್ರರ ಅಡಗು ತಾಣಗಳ ಮೇಲೆ ದಾಳಿ, ಉಗ್ರರ ಚಲನ ವಲನಗಳ ವೀಕ್ಷಣೆ, ಉಗ್ರರ ದಾಳಿಗೆ ಪ್ರತಿಯಾಗಿ ದಾಳಿ ಮಾಡುವಂತಹ ಜೀವನ್ಮರಣದಂತಹ ಘಟನೆಗಳನ್ನು ಸಾಕಷ್ಟು ಕಂಡಿದ್ದಾರೆ. ಎನ್.ಸಿ.ಸಿ ವಿಭಾಗದಲ್ಲಿ ಬೋಧಕರಾಗಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಹಾಗೂ ಶಿಸ್ತಿನ ಕುರಿತಾಗಿಅರಿವು ಹಾಗೂ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

promotions
logintomyvoice

ಉಗ್ರರು ಅವಿತಿರುವ ಮಾಹಿತಿಯಾಧರಿಸಿ 12 ಜನರ ಗುಂಪಿನೊಂದಿಗೆ ಗುಡ್ಡಗಾಡಿನ ಅತೀ ಎತ್ತರದ ಪ್ರದೇಶದಲ್ಲಿ ಪ್ಲೇಮ್ ಗನ್, ಎ.47 ಆಯುಧಗಳೊಂದಿಗೆ ಉಗ್ರರರ ಗುಂಪಿಗೆ ಗೊತ್ತಾಗದ ಹಾಗೆ ತಲುಪಿ ಅವರ ಮೇಲೆ ಕಣ್ಣಿಡಲಾಯಿತು. ಸತತ 3 ದಿನಗಳ ಕಾಲ ಹಗಲು ರಾತ್ರಿ ಉಗ್ರರ ಮೇಲೆ ನಿಗಾವಹಿಸಿದ್ದಾರೆ. ಮೊದಲು ಉಗ್ರರ ಕಡೆಯಿಂದ ಗುಂಡಿನ ದಾಳಿ ಪ್ರಾರಂಭವಾದ ಮೇಲೆ 12 ಜನ ಗುಂಪಿನಿಂದ ಪ್ರತಿ ದಾಳಿ ಮಾಡಿದ್ದಾರೆ. ಸತತ 6 ಗಂಟೆಗಳು ಗುಂಡಿನ ದಾಳಿಯ ಬಳಿಕ ಉಗ್ರರು ಅವಿತಿರು ಪ್ರದೇಶಕ್ಕೆ ದೈರ್ಯ ಮಾಡಿ ಒಳನುಗ್ಗಿದಾಗ ಮಾರುತಿಯವರ ಗುಂಡಿಗೆ ಮೂವರು ಸಾವನ್ನಪ್ಪಿ ಮೂವರು ತಪ್ಪಿಸಿಕೊಂಡಿದ್ದಾರೆ. ಉಗ್ರರು ಅವಿತಿಟ್ಟ ಶಸ್ತ್ರಾಸ್ತ್ರಗಳು ಮಹತ್ವದ ದಾಖಲೆಗಳನ್ನು ರಕ್ಷಣಾ ಇಲಾಖೆಗೆ ದೊರೆಯುವಂತೆ ಮಾಡಿದ್ದಾರೆ.

logintomyvoice

ಸತತ 30 ವರ್ಷಗಳ ಕಾಲ ಉಗ್ರರ ಜೊತೆ ಸೇನಸಾಟ, ಭದ್ರತಾ ಕಾರ್ಯಗಳು, ಆಯುಧಗಳ ರಕ್ಷಣೆ, ಚುನಾವಣೆ, ಶಿಸ್ತಿನ ಪಥ ಸಂಚಲನ, ಅತಿವೃಷ್ಠಿ ಅನಾವೃಷ್ಠಿ, ಗಣ್ಯರಿಗೆ ಭದ್ರತೆಯ ಸಂದರ್ಭದಲ್ಲಿ ಶಿಸ್ತಿನಿಂದ ಕಾರ್ಯನಿರ್ವಹಿಸಿ ಶಿಸ್ತಿನ ಸುಬೇದಾರರೆನಿಸಿಕೊಂಡು ನಿವೃತ್ತರಾಗಿದ್ದಾರೆ. ಮಾರುತಿಯವರಿ ಹೆಂಡತಿಯಾದ ಲಕ್ಷ್ಮೀ ಇಬ್ಬರು ಮಕ್ಕಳಾದ ಸಂತೋಷ ಮತ್ತು ಶ್ರೀಧರ ಅಂತಹ ಸುಂದರ ಸಂಸಾರವಿದೆ. ನಿವೃತ್ತಿಯ ನಂತರದ ದಿನಗಳಲ್ಲಿ ಸಾಮಾಜದಲ್ಲಿ ಬೆರೆತು ಶಿಸ್ತು ಹಾಗೂ ವೈಚಾರಿಕ ನೆಲೆಗಟ್ಟಿನ ಮೇಲೆ ಸಾರ್ವಜನಿಕ ಬದುಕು ಸಾಗಿಸುವ ಮಹತ್ವಾಕಾಂಕ್ಷೆಹೊಂದಿದ್ದಾರೆ. ದೇಶ ಭಕ್ತಿ ದೇಶ ಪ್ರೇಮ ಹಾಗೂ ಇಂದಿನ ಯುವಕರಿಗೆ ಮಾದರಿಯಾಗುವ ವ್ಯಕ್ತಿತ್ವ ವಿಕಸನದಲ್ಲಿ ಮಾರ್ಗದರ್ಶಿಗಳಾಗಿರಲಿ ಎಂಬುದು ಪ್ರತಿಯೊಬ್ಬರ ಹಾರೈಕೆಯಾಗಿದೆ.
ವರದಿ: ಕೆ.ಎಲ್ ಮೀಶಿ(ಮೂಡಲಗಿ)

Read More Articles