ಬೆಳಗಾವಿ ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿದ ಭಜರಂಗಿ-2 ಸಿನಿಮಾ ಋಷಿ

ಬೆಳಗಾವಿ: ಧನ್ವಂತರಿ ವಂಶಸ್ಥರು ಹಾಗೂ ಆಯುವೇರ್ಧದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಡಾ.ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾ ಪಕ್ಕಾ ಕುಟುಂಬ ಸಮೇತ ನೋಡುವ ಸಿನಿಮಾ ಆಗಿದೆ ಎಲ್ಲರೂ ನೋಡಿ ಚಿತ್ರ ತಂಡಕ್ಕೆ ಪ್ರೋತ್ಸಾಹಿಸಬೇಕು ಎಂದು ಚಿತ್ರದಲ್ಲಿ ಋಷಿ ಪಾತ್ರ ಮಾಡಿರುವ ವಜ್ರಗಿರಿ ಹೇಳಿದರು.

Your Image Ad

ಸೋಮವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಗೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು. ಸಿನಿ ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರ ಭಜರಂಗಿ-2 ಸಿನಿಮಾ ರಾಜ್ಯಾಧ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಮುಂದಿನ ಜನಾಂಗಕ್ಕೆ ಆಯುವೇರ್ಧದ ಬಗ್ಗೆ ಜಾಗೃತಿ ಮೂಡಿಸಿ ಅದನ್ನು ಉಳಿಸಿ ಬೆಳೆಸಬೇಕೆನ್ನುವ ಸಂದೇಶ ನೀಡಿದೆ. ಪರಿಸರದಿಂದ ಅಪಾರ ಪ್ರಮಾಣದಲ್ಲಿ ಔಷಧಿಗಳನ್ನು ಸಿದ್ಧಪಡಿಸಿ ಜನರ ಕಾಯಿಲೆಯನ್ನು ದೂರ ಮಾಡಬಹುದು ಎಂದು ತೋರಿಸಿಕೊಟ್ಟಿದೆ. ಎಲ್ಲರೂ ಕುಟುಂಬಸ್ಥರೊಂದಿಗೆ ಈ ಸಿನಿಮಾ ವೀಕ್ಷಣೆ ಮಾಡಿ ಚಿತ್ರ ತಂಡಕ್ಕೆ ಹಾರೈಸಬೇಕೆಂದರು.

Your Image Ad

ಭಜರಂಗಿ-2 ಕನ್ನಡ ಚಲನಚಿತ್ರ ಬರುವ ಮುಂಚೆಯೇ ಬೆಳಗಾವಿಯ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಧನ್ವಂತರಿ ಹೋಮದ ಮೂಲಕ ಕೊರೊನಾ ಹೋಗಲಾಡಿಸುವಂತ ಕಾರ್ಯ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನಮ್ಮ ದೇಶದ ಪರಂಪರೆ, ಸಂಸ್ಕೃತಿ ಉಳಿಸುವಲ್ಲಿ ಮಠ ಮಾನ್ಯಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕನ್ನಡದ ವಜ್ರಮುನಿ. ಉದಯೋನ್ಮುಖ ನಟ ವಜ್ರಗಿರಿ ಭಜರಂಗಿ-2 ಚಲನಚಿತ್ರದಲ್ಲಿ ಋಷಿಮುನಿ ಪಾತ್ರ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕನ್ನಡದ ಕಲಾವಿದರಿಗೆ ಭರ್ಜರಿ ಅವಕಾಶ ಸಿಕ್ಕಿದೆ. ಅದರಲ್ಲೂ ಬಹಳ ವಿಶೇಷ ವಿಭಿನ್ನ ವಿಶಿಷ್ಟ ಪಾತ್ರಗಳ ಅನಾವರಣ ಇದರಲ್ಲಿ ವಜ್ರಗಿರಿ ದಕ್ಷಿಣ ಭಾರತಕ್ಕೆ ಸಿಕ್ಕ ಅದ್ಭುತ ಪ್ರತಿಭೆ ಎಂದರು.

Your Image Ad

26ನೇ ವಯಸ್ಸಿಗೆ 80,100ರ ವಯೋವೃದ್ಧರ ಧ್ವನಿ ನೀಡುವುದು ಬಹಳ ಕಷ್ಟ. ಅಂಥದ್ದರಲ್ಲಿ ವಜ್ರಗಿರಿ ಭಜರಂಗಿ-2 ಸಿನಿಮಾದಲ್ಲಿ ಋಷಿ ಪಾತ್ರ ಮಾಡುವುದರ ಮೂಲಕ ಧನ್ವಂತರಿ ವಂಶಸ್ಥರು ಹಾಗೂ ಆಯುವೇರ್ಧದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆಯುವೇರ್ಧ ಪರಂಪರೆಯಿAದ ಬೆಳೆದು ಬಂದಿದ್ದು, ಅದನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯ. ಅದನ್ನು ಭಜರಂಗಿ-2 ಸಿನಿಮಾದಲ್ಲಿ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಈ ಚಲನಚಿತ್ರ ಯಶಸ್ಸು ಕಾಣಲಿ ಎಂದು ಶುಭಹಾರೈಸಿದರು.

Your Image Ad

Read More Articles