ಲಕ್ಷ್ಯ ಚಲನಚಿತ್ರದ ಮೂಲಕ ಉತ್ತರ ಕರ್ನಾಟಕದಲ್ಲಿ ಹೊಸ ಯುಗ ಪ್ರಾರಂಭವಾಗಿದೆ: ಡಾ.ಕೋರೆ

ಬೆಳಗಾವಿ: ಲಕ್ಷ್ಯ ಕನ್ನಡ ಚಲನಚಿತ್ರದ ಮೊದಲ ಪ್ರೀಮಿಯರ್‌ ಶೋ ಬೆಳಗಾವಿಯಲ್ಲಿ ಆಗುತ್ತಿರುವುದು ಉತ್ತರ ಕರ್ನಾಟಕದಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

Your Image Ad

ಭಾನುವಾರ ನಗರದ ಪ್ರಕಾಶ ಚಿತ್ರ ಮಂದಿರದಲ್ಲಿ ಲಕ್ಷ್ಯ ಕನ್ನಡ ಚಲನಚಿತ್ರದ ಪ್ರಿಮಿಯರ್ ಶೋ ಪ್ರದರ್ಶನ ವೀಕ್ಷಿಸುವ ಮುನ್ನ ಚಲನ‌ ಚಿತ್ರದ ಕುರಿತು ಶುಭ ಹಾರೈಸಿ ಮಾತನಾಡಿದರು.

Your Image Ad

ಲಕ್ಷ್ಯ ಚಲನಚಿತ್ರದ ಮೂಲಕ ಉತ್ತರ ಕರ್ನಾಟಕದಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ಈ ಭಾಗದಲ್ಲಿ ಕಲಾವಿದರು, ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಡುವ ವೇದಿಕೆಯಾಗಬೇಕು. ಈ ರೀತಿಯಲ್ಲಿ ಲಕ್ಷ್ಯ ಕನ್ನಡ ಚಲನಚಿತ್ರ ಮಾಡಿರುವುದು ನಿಜಕ್ಕೂ ಉತ್ತರ ಕರ್ನಾಟಕದವರು ಹೆಮ್ಮೆ ಪಡುವ ಸಂಗತಿ ಎಂದರು.

Your Image Ad

ಚಲನಚಿತ್ರ ರಂಗದಲ್ಲಿ ಮೊದಲು ಚೆನೈನಲ್ಲಿ ಬಳಿಕ‌‌ ಬೆಂಗಳೂರಿನವರು ನಡೆಸಿಕೊಂಡು ಬಂದಿದ್ದರು. ಆದರೆ ಉತ್ತರ ಕರ್ನಾಟಕದಲ್ಲಿ ಚಲನಚಿತ್ರ ಮಾಡಿ ಹೊಸ ಯುಗ ಆರಂಭ ಮಾಡಿದ್ದಾರೆ ಎಂದರು.

Your Image Ad

ಲಕ್ಷ್ಯ ಚಲನಚಿತ್ರದ ನಟ ಸಂತೋಷರಾಜ್ ಜವರೆ ಅವರು ಈ ಭಾಗದ ಭಾಷೆ ದೇಶಕ್ಕೆ‌‌ ಹಾಗೂ ರಾಜ್ಯಕ್ಕೆ ಪರಿಚಯ ಮಾಡಿಕೊಡಲಿ ಎಂದು ಶುಭ ಹಾರೈಸಿದರು.. ಲಕ್ಷ್ಯ ಕನ್ನಡ ಚಿತ್ರವು ಇದೆ 18ರಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು,ಸಮಸ್ತ ಬೆಳಗಾವಿ ಸಿನೆಮಾಸಕ್ತರು ಈ ಚಿತ್ರವನ್ನು ನಗರದ ಪ್ರಕಾಶ ಚಿತ್ರಮಂದಿರದಲ್ಲಿ ನೋಡಿ,ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕೆಂದು ಹರಸಿದರು..ಚಿತ್ರದ ಕಥೆ ಮತ್ತು ನಿರ್ದೇಶನವನ್ನು ರವೀ ಸಾಸನೂರ್ ಮಾಡಿದ್ದು,ಚಿತ್ರಕಥೆ,ಸಹ ನಿರ್ದೇಶನ ಮತ್ತು ಸಂಕಲನವನ್ನು ಶಿವಕುಮಾರ್ ಎ ಮಾಡಿದ್ದಾರೆ.

ರಾಜು ದೊಡ್ಡಣ್ಣವರ, ಎನ್.ಆರ್ ಲಾತೂರ,ಕಲಾವಿದ ಮತ್ತು ಕಾರ್ಯಕಾರಿ ನಿರ್ಮಾಪಕ ಸಂತೋಷರಾಜ್ ಝಾವರೆ,ನೀತಿನಾದ್ವಿ,ನಿರ್ಮಾಪಕರಾದ ಸುಧೀರ್ ಹುಲ್ಲೋಳಿ, ಆನಂದ ಕೊಳಕಿ,ಶಿವಕುಮಾರ್ ಎ, ರವೀ ಸಾಸನೂರ್ ಇದ್ದರು, ಇನ್ನಿತರರು ‌ಉಪಸ್ಥಿತರಿದ್ದರು.

Read More Articles