ಬೆಳಗಾವಿ ನಗರದಲ್ಲಿ ಬೇಕಾ ಬಿಟ್ಟಿ ಹೊರಗೆ ಬಂದ್ರೆ ಬೀಳುತ್ತೆ ದಂಡ .
- 14 Jan 2024 , 11:14 PM
- Belagavi
- 119
ಬೆಳಗಾವಿ:ಬೆಳಗಾವಿಯಲ್ಲಿ ಕೋವಿಡ್ ಮಹಾಮಾರಿ ಅಟ್ಟಹಾಸ ಮುಂದುವರೆದಿದ್ದು ಸರಕಾರ ವಿಕೇಂಡ್ ಕರ್ಪ್ಯೂ ಘೋಷಣೆ ಮಾಡಿದೆ ಅದೇ ರೀತಿ ಬೆಳಗಾವಿಯ ಜಿಲ್ಲಾಡಳಿತ ಕೂಡಾ ಕಟ್ಟು ನಿಟ್ಟಿನ ಸೂಚನೆ ಪಾಲಿಸಲು ಮುಂದಾಗಿದೆ.
ಬೆಳಗಾವಿ ನಗರದಲ್ಲಿ ಕೋವಿಡ್ ಮಹಾಮಾರಿ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಗಡಿ ಭಾಗ ಬೆಳಗಾವಿಯಲ್ಲಿ ವಿಕೇಂಡ್ ಕರ್ಪ್ಯೂ ಜಾರಿ ಮಾಡಿ ಸರಕಾರ ಆದೇಶ ನೀಡಿದೆ.ನಿನ್ನೆ ರಾತ್ರಿ 10 ಗಂಟೆಯಿಂದ ವಿಕೇಂಡ್ ಕರ್ಪ್ಯೂ ಜಾರಿಯಾಗಿದ್ದು ಸೋಮವಾರ ಮುಂಜಾನೆ 5 ಗಂಟೆಯವರೆಗೆ ವಿಕೇಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ ಈ ಹಿನ್ನಲೆಯಲ್ಲಿ ಅನಾವಶ್ಯಕವಾಗಿ ಹೊರಗೆ ಬರುತ್ತಿರುವ ಸಾರ್ವಜನಿಕರನ್ನ ತಡೆದು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೋಲಿಸ ಇಲಾಖೆ ವತಿಯಿಂದ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಕೋವಿಡ್ ನಿಯಮಗಳನ್ನ ಪಾಲಿಸಲು ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ.
ಆದರೆ ಮಾಸ್ಕ್ ಕಡ್ಡಾಯವಾಗಿ ಹಾಕಲೇ ಬೇಕಾಗಿರುವುದು,ಮಾಸ್ಕ ಹಾಕದೆ ಹೊರಗೆ ಬರುತ್ತಿರುವ ಬೈಕ್ ಸವಾರರನ್ನ ವಿಚಾರಿಸಿ ದಂಡ ಹಾಕುತ್ತಿರುವ ದೃಶ್ಯ ಬೆಳಗಾವಿ ಚೆನ್ನಮ್ಮ ವೃತ್ತದ ಬಳಿ ನಡೆದಿದೆ.ನಗರದಲ್ಲಿ ಮಾಸ್ಕ ಹಾಕದೆ ಹೊರಗೆ ಬಂದ್ರೆ 250 ರೂಪಾಯಿ ದಂಡ ಹಾಕುತ್ತಿರುವುದು ಕಂಡು ಬಂದಿದೆ.
ಸರಕಾರದ ಆದೇಶವನ್ನ ಪಾಲಿಸುವಂತೆ ಬೆಳಗಾವಿ ಜಿಲ್ಲಾಡಳಿತ ಸೂಚನೆ ನೀಡಿದ್ದು ಯಾವುದೇ ಒತ್ತಡ ಕೂಡಾ ಹಾಕಿಲ್ಲ ಆದರೆ ಜನರು ಸರಕಾರದ ಆದೇಶಕ್ಕೆ ಬೆಂಬಲ ನೀಡುತ್ತಾರಾ ಎನ್ನುವುದನ್ನ ಕಾದು ನೋಡಬೇಕಿದೆ.