ಬಡವರ ಕಣ್ಣು ಒರೆಸುವ ಕಾರ್ಯವಾಗಬೇಕು: ರಾಹುಲ್
- 30 Dec 2023 , 6:05 PM
- Belagavi
- 118
ಬೆಳಗಾವಿ : ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರಾಹುಲಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳು ಆಗಲಿ. ಬಡವರ ಕಣ್ಣೀರೊರೆಸುವ ಕಾರ್ಯಗಳು ನಮ್ಮಿಂದಾಗಬೇಕು ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದಲ್ಲಿ ಶುಕ್ರವಾರ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಹುಲ್ ಅಭಿಮಾನಿಗಳ ಬಳಗ ವರ್ಷದ 365 ದಿನವೂ ಸಕ್ರಿಯವಾಗಿರಬೇಕು. ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ, ಬಡವರ ಪರ ಕೆಲಸಗಳನ್ನು ಮಾಡಬೇಕು. ಕ್ರೀಡೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಇದಕ್ಕೆ ನಮ್ಮಿಂದ ಎಲ್ಲ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಹುದಲಿ ಗ್ರಾಮದ ಜನರು ಸಹ ತಮ್ಮ ಯಾವುದೇ ಸಮಸ್ಯೆ ಇದ್ದರು, ನಮ್ಮನ್ನ ಅಥವಾ ನಮ್ಮ ಅಭಿಮಾನಿ ಬಳಗದ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತರುವ ಕೆಲಸ ಮಾಡಬೇಕು. ಆ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಮೊದಲು ರಾಹುಲ್ ಜಾರಕಿಹೊಳಿ ಅವರನ್ನು ಮಹಿಳೆಯರು ಆರತಿ ಎತ್ತಿ ಅದ್ಧೂರಿಯಿಂದ ಸ್ವಾಗತಿಸಿದರು. ಬಳಿಕ ಹುದಲಿ ಗ್ರಾಮದಲ್ಲಿ ಕುದುರೆ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭ ಹೊತ್ತು ನಡೆದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿದ್ಯಾ ಭದ್ರಕಾಳಿ, ಚಂದ್ರಗೌಡ ಭದ್ರಕಾಳಿ, ಬಾಳೇಶ್ ಮಲ್ಲೂರಿ, ಅಡಿವೇಶ ಮಲ್ಲೂರಿ, ಯಲ್ಲೇಶ ಭಜಂತ್ರಿ, ಸಂತೋಷ ತೂಕಾರ, ಶಬ್ಬಿರ್ ಇನಾಮ್ದಾರ್, ಅಡಿವೇಪ್ಪ ಗಿಡಗಿಡಿ, ಮಾರುತಿ ಬೆಟಗೇರಿ, ವಿರುಪಾಕ್ಷಿ ಮಜಗಿ, ಚಂದ್ರ ಪಾವಡಿ, ಯಲ್ಲಪ್ಪ ತಲ್ಲೂರಿ, ರಾಜು ಬಡಿಗೇರ, ರಾಜು ಮೋದಗಿ, ಶಂಕರಗೌಡ ಪಾಟೀಲ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು, ಯುವಕರು ಪಾಲ್ಗೊಂಡಿದ್ದರು.