ರಾಮದುರ್ಗ ಮಕ್ಕಳ ಸಾವಿನ ಪ್ರಕರಣ: ತನಿಖೆಗೆ ಡಿಸಿ ಆದೇಶ
- 14 Jan 2024 , 10:30 PM
- Belagavi
- 113
ಬೆಳಗಾವಿ : ರಾಮದುರ್ಗ ತಾಲೂಕಿನ ಮೂರು ಕಂದಮ್ಮಗಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಹೇಳಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ವಯಸ್ಸಿನ ಆಧಾರಿತ ಮೈಲಿ ಬೇನೆ, ರೂಬೆಲ್ಲಾ ಲಸಿಕೆ ಕೊಡುವ ಕಾರ್ಯಕ್ರಮ ಚಾಲನೆಯಲ್ಲಿದೆ. ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಕೇಂದ್ರದ ಪ್ರದೇಶಕ್ಕೆ ಸಂಭಂದಿಸಿದಂತೆ ಸುಮಾರು ಮಕ್ಕಳಿಗೆ ಎಮ್.ಆರ್. ಚುಚ್ಚು ಮದ್ದು ಕೊಟ್ಟಿದ್ದಾರೆ.
6 ಜನ ಮಕ್ಕಳಲ್ಲಿ 3 ಮಕ್ಕಳಿಗೆ ತೊಂದರೆಯಾಗಿ ಮೃತರಾಗಿದ್ದಾರೆ. ಇನ್ನು ಮೂರು ಮಕ್ಕಳು ಆರೋಗ್ಯವಾಗಿದ್ದಾರೆ. ಈಗಾಗಲೇ ತನಿಖೆಗೆ ಆದೇಶ ಮಾಡಿದ್ದೇವೆ ತನಿಖೆ ವರದಿ ಬಂದ ಮೇಲೆ ತಪ್ಪಿತಸ್ಥರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಲಸಿಕೆ ನೀಡುವ ಕಾರ್ಯಕ್ರಮವನ್ನು ಅಲ್ಲಿಗೆ ತಡೆ ಹಿಡಿಯಲಾಗಿದೆ. ಮೃತ ಮಕ್ಕಳ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಕಳಿಸಲಾಗಿದೆ ಎಂದು ಹೇಳಿದರು.