ಸರಕಾರಿ ಶಾಲೆಯಲ್ಲಿ ಧ್ವಜಾರೋಹಣ
- 15 Jan 2024 , 1:33 AM
- Belagavi
- 129
ಬೆಳಗಾವಿ : ಮರಡಿ ನಾಗಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಕಾವೇರಿ ಬಾಬು ಚಂದರಗಿ ಇವರು ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ನಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಏಳನೇ ತರಗತಿ ಯ ಎಲ್ಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ತಂದು ಪ್ರತಿ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಉತ್ತಮ ದರ್ಜೆಯ ಮಾಸ್ಕ ಗಳನ್ನು ತಾವು ಹಾಗೂ ತಮ್ಮ ಸ್ನೇಹಿತರನ್ನು ಕೂಡಿಸಿ ಹೊಲೆದು ಸುಮಾರು ಎರಡು ನೂರಾ ಎಂಬತ್ತಕ್ಕೂ ಅಧಿಕ ಉತ್ತಮ ಗುಣಮಟ್ಟದ ಮಾಸ್ಕಗಳನ್ನು ತಯಾರಿಸಿ.
ಗಣರಾಜ್ಯೋತ್ಸವದ ದಿನ ನಮ್ಮೂರಿನ ಸರ್ಕಾರಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿ ಗಳಿಗು ಹಂಚಿರುವ ಇವರ ಸಾಮಾಜಿಕ ಸೇವೆ, ಕಾಳಜಿಯನ್ನು ಮರಡಿ ನಾಗಲಾಪುರ ಅಭಿವೃದ್ದಿ ವೇದಿಕೆ, ಹಾಗೂ ಮರಡಿ ನಾಗಲಾಪುರ ಗ್ರಾಮ ಜಾಗೃತ ನೌಕರರ ವೇದಿಕೆ ಯಿಂದ ಹೃದಯ ಪೂರ್ವಕ ಅಭಿನಂದನೆ ಗಳನ್ನು ಸಲ್ಲಿಸುತ್ತೇವೆ.