ಸಿದ್ದು,‌ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದ ಹಿರೇಮಠ

ಬೆಳಗಾವಿ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ವಾಗ್ದಾಳಿ ನಡೆಸಿದರು.

promotions

ನ್ಯೂ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಕೇಂದ್ರ ಸರಕಾರ ಐತಿಹಾಸಿಕ ರೈತ ಚಳುವಳಿಯಿಂದ ಮುಂಬರುವ ಚುನಾವಣೆಯಲ್ಲಿ ಎದುರಾಗುವ ಪರಿಣಾಮದಿಂದ ಕೃಷಿ ಮಸೂದೆ ಕಾಯ್ದೆಯನ್ನು ಹಿಂಪಡೆದರು.

promotions

ಕಳೆದ 2012ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ‌ಮೋದಿ ಅವರು ಮನಮೋಹನ ‌ಸಿಂಗ್ ಪ್ರಧಾನಿಯಾಗಿದ್ದಾಗ ಎಂಎಸ್ ಪಿ ನೀಡುವಂತೆ ಹೇಳಿದ್ದರು. ಆದರೆ ಈಗ ಅದರ‌ ಬಗ್ಗೆ ಚಕಾರ ಎತ್ತುತ್ತಿಲ್ಲ‌ ಎಂದು‌‌ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಕೃಷಿ ಮಸೂದೆ ಕಾಯ್ದೆ ಹಿಂಪಡೆದರೂ ರಾಜ್ಯ ಸರಕಾರ ಮಾತ್ರ ಹಿಂಪಡೆಯುವುದಿಲ್ಲ. ಈ ಕುರಿತು ರಾಜ್ಯದ ಎಲ್ಲ ರೈತರು ಯಾಕೆ ಬೆಂಬಲ ನೀಡಿದರು ಎಂದು ಶಾಸಕರ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಸಿದಗೌಡ ಮೋದಗಿ ಎಪಿಎಂಸಿ ವರ್ತಕರಾದ ಬಸನಗೌಡಾ ಪಾಟೀಲ, ಸತೀಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles