ಅಂತರರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ : ಭಾರತಾಂಬೆಯ ಮೂಡಿಗೆರಿದ ಚಿನ್ನದ ಪದಕ
- 15 Jan 2024 , 3:37 AM
- world
- 161
ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ಏರ್ಪಡಿಸಲಾಗಿದ್ದ 2022-23 ನೇ ಸಾಲಿನ ಅಂತರರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ಉಮೇಶ ನಾಯಕ ಭಾರತವನ್ನು ಪ್ರತಿನಿದಿಸಿ ಚಿನ್ನದ ಪದಕವನ್ನು ಭಾರತಾಂಬೆಯ ಮೂಡಿಗೆರಿಸಿದ್ದಾನೆ.
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಉಮೇಶ ಸತತ ಪರಿಶ್ರಮದಿಂದ ಕುಸ್ತಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿ ರಾಜ್ಯ, ರಾಷ್ಟ್ರಮಟ್ಟದ ಹತ್ತಾರು ಬಹುಮಾನವನ್ನು ಮೂಡಿಗೆರಿಕೊಂಡು ಪ್ರಸ್ತುತ ಶನಿವಾರ(ಮೇ 28) ರಂದು ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಭಾರತಾಂಬೆಗೆ ಚಿನ್ನದ ಪದಕವನ್ನು ಮೂಡಿಗೆರಿಸಿದ್ದು ಹೆಮ್ಮೆಯ ಸಂಗತಿ.