ಬೃಹತ್ ಉದ್ಯೋಗ ಮೇಳದಲ್ಲಿ 738 ಅಭ್ಯರ್ಥಿಗಳು ಆಯ್ಕೆ

ಬೈಲಹೊಂಗಲ : ಪಟ್ಟಣದ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಪಾಲಿಟೆಕ್ನಿಕ (ಡಿಪ್ಲೋಮಾ) ಕಾಲೇಜಿನಲ್ಲಿ ಇಂದು ಬೃಹತ್ ಉದ್ಯೋಗ ಮೇಳ ನಡೆಯಿತು. 25 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಎಸ್ಎಸ್ಎಲ್ ಸಿ, ಐ.ಟಿ.ಐ, ಪಿ.ಯು.ಸಿ, ಡಿಪ್ಲೋಮಾ, ಬಿ.ಇ ಮತ್ತು ವಿವಿಧ ಪದವಿಧರರ ಒಟ್ಟು 1487 ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಯಿತು. 

promotions

  ಕೆ.ಎಲ್.ಇ. ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ವ್ಯಕ್ತಿತ್ವ ವಿಕಸನ ರೂಡಿಸಿಕೊಳ್ಳುವದರಿಂದ ಉದ್ಯೋಗದಲ್ಲಿ ಸಹಕಾರಿಯಾಗಲಿದೆ ಎಂದರು. 

promotions

 ಇನಾಮದಾರ ಸಕ್ಕರೆ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ರವೀಂದ್ರ ಪಟ್ಟಣಶೆಟ್ಟಿ ಮಾತನಾಡಿ, ಉದ್ಯೋಗಾವಕಾಶಗಳು ಲಭ್ಯವಿರುವಲ್ಲಿಗೆ ಹೋಗಿ ಆದಾಯ ಗಳಿಸುವುದರ ಜೊತೆಗೆ ಜ್ಞಾನವನ್ನು ಕೂಡಾ ಹೆಚ್ಚಿಸಿಕೊಳ್ಳಬೇಕೆಂದರು. 

ಸಂಸ್ಥೆಯ ನಿರ್ದೇಶಕ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಿದ್ಯೆ ನೀಡುವದರ ಜೊತೆಗೆ ಇಂತಹ ಉದ್ಯೋಗ ಮೇಳ ಆಯೋಜನೆ ಮಾಡುವದರಿಂದ ವಿದ್ಯಾರ್ಥಿಗಳಿಗೆ ಅನೂಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎಂದರಲ್ಲದೆ ಉದ್ಯೋಗ ಮೇಳದಂತಹ ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು. 

ಪ್ರಾಚಾರ್ಯ ಶ್ರೀಧರ ನಿರಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 

 ಸಂದರ್ಶನದಲ್ಲಿ 738 ಅಭ್ಯರ್ಥಿಗಳು ಆಯ್ಕೆಯಾದರು.  

 ತರಬೇತಿ ಮತ್ತು ಉದ್ಯೋಗ ಅಧಿಕಾರಿ ಸತೀಶ ಪಾಟೀಲ, ಎಸ್. ಎಸ್. ಶರಣಪ್ಪನವರ, ಆಯ್. ಎನ್. ಹಾದಿಮನಿ, ಎಸ್. ಎಮ್. ಕಳಸಣ್ಣವರ, ವಿ. ಬಿ. ಪಾಟೀಲ, ಎ. ಎಮ್. ಪಾಟೀಲ, ಆರ್. ಪಿ. ದೊಡ್ಡಹುಬ್ಬಳ್ಳಿ, ಆರ್. ಎನ್. ವಾರಿ, ಎಮ್. ಎ. ಸವದತ್ತಿಮಠ, ಎಮ್. ಬಿ. ಕಡಬಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭ್ಯರ್ಥಿಗಳು ಇದ್ದರು. ಎಚ್.ಆಯ್.ಸಂಕಣ್ಣವರ ನಿರೂಪಿಸಿದರು ಸತೀಶ ಪಾಟೀಲ ವಂದಿಸಿದರು.

ವರದಿ  : ರವಿಕಿರಣ್  ಯಾತಗೇರಿ 

Read More Articles