ವಾ.ವಾ... ಕಿಚ್ಚನ ಹೊಸ ರಾಕ್ ಸ್ಟಾರ್ ಲುಕ್ ಅಭಿಮಾನಿಗಳು ಫಿದಾ
- 30 Dec 2023 , 10:31 AM
- Bengaluru
- 177
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್, ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ರಾಕ್ ಸ್ಟಾರ್ ಲುಕ ನಲ್ಲಿ ಮಿಂಚಿದ್ದಾರೆ. ಹೌದು ಲಾಕ್ ಡೌನ್ ಬಳಿಕ ಸದ್ಯ ಬಹುನಿರೀಕ್ಷೆಯ ಪ್ಯಾಂಟಮ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಅವರು ಹೈದ್ರಾಬಾದ್ ನಲ್ಲೇ ಉಳಿದುಕೊಂಡಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸೋಮವಾರ ಹೈದರಾಬಾದ್ ಏರ್ ಪೋರ್ಟ್ ನಲ್ಲಿ ರಾಕ್ ಸ್ಟಾರ್ ಲುಕ್ ನಲ್ಲಿ ಎಂಟ್ರಿ ಆಗಿದ್ದು, ಕಿಚ್ಚನ ಈ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸುದೀಪ್ ಅವರ ಮಾಸ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗತಿದ್ದು ಕಿಚ್ಚನ ಮಾಸ್ ಲುಕ್ ಗೆ ಅಭಿಮಾನಿಗಳು ವಾವಾ... ಅಂತಿದ್ದಾರೆ. ಕಪ್ಪು ಜೀನ್ಸ್, ಟೀ ಶರ್ಟ್, ಲೆದರ್ ಜಾಕೆಟ್, ಮಾಸ್ಕ್ ಹಾಗೂ ಸ್ಟೈಲಿಶ್ ಕನ್ನಡಕದೊಂದಿಗೆ ಮಾಸ್ ಆಗಿ ಹೈದರಾಬಾದ್ಗೆ ಬಂದಿಳಿದಿರುವ ನಟ ಸುದೀಪ್, ಫ್ಯಾಂಟಮ್ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಪ್ಯಾಂಟಮ್ ಚಿತ್ರಕ್ಕೆ ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳ್ತಾಯಿದ್ದಾರೆ.
ಇದರ ಹೊರತಾಗಿ ಸುದೀಪ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಫ್ಯಾಂಟಮ್ ಸಿನಿಮಾ ಬಳಿಕ ಅನೂಪ್ ಭಂಡಾರಿ ನಿರ್ದೇಶನದ ಅಶ್ವತ್ಥಾಮ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಇತ್ತ ಸುದೀಪ್ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾವಾದ ಕೋಟಿಗೊಬ್ಬ -3 ಸಿನಿಮಾ ಸಹ ಬಿಡುಗಡೆಗೆ ಸಜ್ಜಾಗಿ ನಿಂತಿದೆ ಕಾತುರದಿಂದ ಕಾಯುತ್ತಿರುವ ಪ್ರೇಕ್ಷಕರ ವೀಕ್ಷಣೆಗೆ ಯಾವಾಗ್ ಬಿಡುಗಡೆ ಆಗುತ್ತೆ ಕಾದುನೋಡಬೇಕು.