ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗದಿಂದ ಸೊಗಲ ಸೋಮೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ
- shivaraj B
- 25 Aug 2024 , 3:31 PM
- Bailhongal
- 248
ಬೈಲಹೊಂಗಲ- ಸಮೀಪದ ಸೊಗಲ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಪಟ್ಟಣದ ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗದಿಂದ ರವಿವಾರ ವಿಶೇಷ ಪೂಜೆ, ಪ್ರಾರ್ಥನೆ, ಹೋಮ ನೆರವೇರಿಸಲಾಯಿತು ಪಟ್ಟಣದಿಂದ ಸುಮಾರು 60 ಕ್ಕೂ ಹೆಚ್ಚು ಬಳಗದ ಯುವಕರು ಪಾದಯಾತ್ರೆಯಲ್ಲಿ ಬಂದು ಕಾಲ್ನಡಿಗೆಯಲ್ಲಿ ಹೊಸೂರ, ಮಾಟೊಳ್ಳಿ, ಮಲ್ಲೂರ ಕ್ರಾಸ್ ಮೂಲಕ ಸಾಕ್ಷಾತ್ಃ ಶಿವಪಾರ್ವತಿ ದೇವಿ ವಿವಾಹ ನಡೆದ ಪುಣ್ಯ ಕ್ಷೇತ್ರ ಸೊಗಲ ದೇವಸ್ಥಾನಕ್ಕೆ ತೆರಳಿದರು.
ಪಾದಯಾತ್ರೆಯಲ್ಲಿ ಪ್ರತಿಯೊಬ್ಬರು ಹಣೆಗೆ ತೀಲಕ, ಕೊರಳಲ್ಲಿ ಕೇಸರಿ ಶಾಲು ಧರಿಸಿ ವಸ್ತ್ರಧಾರಿಯಾಗಿ, ರಸ್ತೆಯುದ್ದಕ್ಕೂ ಶಿವಪಾರ್ವತಿ ದೇವಿ, ದುರ್ಗಾಪರಮೇಶ್ವರಿ, ದೇವಾನು ದೇವತೆಗಳಿಗೆ, ಸಾಧು, ಸಂತರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಜಯ ಘೋಷ ಕೂಗುತ್ತಾ ಸಾಗಿದರು.
ದೇವಸ್ಥಾನ ಆವರಣದಲ್ಲಿ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ವೇ.ಮೂ.ಡಾ.ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ, ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ನೇತೃತ್ವದಲ್ಲಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಹೋಮ ನೆರವೇರಿಸಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.
ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಮಾತನಾಡಿ, ಯಾವುದೇ ವಿದ್ಯೆ ಕಲಿಯತರೂ, ಉದ್ಯೋಗ ಮಾಡುತ್ತಿದ್ದರೂ ಆಧ್ಯಾತ್ಮಿಕ ವಿದ್ಯೆಯಿಂದ, ಸದಾಚಾರ ಮೂಲಕ ಸಜ್ಜನಿಕೆಯುಳ್ಳ ನಾಗರಿಕರಾಗಿ ಬದುಕಿ ಬಾಳಬೇಕು. ಪವಿತ್ರ ಶ್ರಾವಣ ಮಾಸದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಪ್ರಮುಖ ಮಠ, ಮಂದಿರ, ದೇವಸ್ಥಾನಕ್ಕೆ ತೆರಳಿ ಶ್ರದ್ಧೆ, ಭಕ್ತಿ ಸಲ್ಲಿಸಿದ ಯುವಕರ ಕಾರ್ಯ ಪ್ರಶಂಸನೀಯವಾಗಿದೆ ಎಂದರು.
ಎಫ್.ಎಸ್.ಸಿದ್ದನಗೌಢರ, ಸಾರಿಗೆ ನೌಕರ ಮಡಿವಾಳಪ್ಪ ಕಿತ್ತೂರ ಮಹಾಪ್ರಸಾದದ ವ್ಯವಸ್ಥೆ ಮಾಡಿದರು.
ಸಂತೋಷ ಹುಣಶೀಕಟ್ಟಿ, ಮಂಜುನಾಥ ಜ್ಯೋತಿ, ಬಸವರಾಜ ಸರಾಯದ, ಆನಂದ ತೋಟಗಿ, ಈರಪ್ಪ ಕಾಡೇಶನವರ, ಅಡವೇಶ, ಆನಂದ ಹಿರೇಮಠ, ಮಂಜುನಾಥ ಕರಿಗಾರ, ಸಂತೋಷ ಬಶಟ್ಟಿ, ರಿತೇಶ ಪಾಟೀಲ, ರಾಜು ದಳವಾಯಿ, ಶರೀಫ ನದಾಫ, ರವಿ ಹುಲಕುಂದ, ರವಿ ವನ್ನೂರ, ಬಸವರಾಜ ಕಟ್ಟಿಮನಿ, ಆನಂದ ಪಡಮದ, ಈರಣ್ಣಾ ಮೇಲಿಕಟ್ಟಿ, ಬಸವರಾಜ ಚಪಳಿ, ಚಂದ್ರಶೇಖರ ವಾಲಿ, ಮಂಜುನಾಥ ಕತ್ತಿ, ಅನೀಲ ಹಿರೇಕೊಪ್ಪ, ರವಿ ರಾಜನ್ನವರ ಶ್ರೀಶೈಲ ಹಂಪಿಹೊಳಿ, ಅಜಯ ಪಟ್ಟಣಶೆಟ್ಟಿ, ಉಮೇಶ ಚೀಲದ, ಮಲ್ಲಿಕಾರ್ಜುನ ಸಣಕಲ್ಲ, ಮಲ್ಲೂ ಬೆಳಗಾವಿ, ಅಜಯ ಚಲವಾದಿ, ಪ್ರಭು ಹಲಕಿ, ಗುಂಡಪ್ಪ ಗೀರನವರ, ಗಣೇಶ ಕರಿಗಾರ, ಅಭಿಷೇಕ ದಳವಾಯಿ ಹಾಗೂ ಮುಂತಾದವರು ಇದ್ದರು.
ವರದಿ : ರವಿಕಿರಣ್ ಯಾತಗೇರಿ