
ಚಟುವಟಿಕೆ ಆಧಾರಿತ ಶಿಕ್ಷಣವೇ ಪರಿಣಾಮಕಾರಿ ಶಿಕ್ಷಣ : ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ
- 14 Jan 2024 , 10:37 PM
- Belagavi
- 393
ಬಿ.ಕೆ. ಮಾಡಲ್ ಸ್ಕೂಲ್ ಒಂದು ಅನುಧಾನಿತ ಶಾಲೆಯಾಗಿದ್ದು, ಉತ್ತಮ ರೀತಿಯ ಶಿಕ್ಷಣವನ್ನು ನೀಡುತ್ತಾ ಇಂದು ವಾರ್ಷಿಕ ಕ್ರಿಡಾಕೂಟವನ್ನು ಆಯೋಜನೆ ಮಾಡಲಾಗಿತ್ತು.

ವಾರ್ಷಿಕ ಕ್ರೀಡಾಕೂಟದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಮಾತನಾಡಿ ಮಕ್ಕಳು ಹೆಚ್ಚಿನ ಜ್ಞಾನ ಗಳಿಸಿದ್ದು ಮಾತೃ ಭಾಷೆಯಲ್ಲಿಯೇ, ಮಕ್ಕಳು ಪಂಜರದ ಗೀಳಿಯಂತಾಗಬಾರದು, ಚಟುವಟಿಕೆ ಆಧಾರಿತ ಶಿಕ್ಷಣ ಪರಿಣಾಮಕಾರಿಯಾದ ಶಿಕ್ಷಣವಾಗಿದೆ ಎಂದರು.

ಭಾರತ ದೇಶವು ಕೃಷಿ ಪ್ರಧಾನವಾದ ದೇಶ, ನಗರ ಮಕ್ಕಳಿಗೆ ಕೃಷಿ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ಶಿಕ್ಷಣದ ಜೊತೆಗೆ ಕೃಷಿಯನ್ನು ಮಾಡಿಸುವ ಮೂಲಕ ಕೃಷಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲಾಗಿವುದು ಎಂದು ಬಿ.ಕೆ.ಮಾಡಲ್ ಸ್ಕೂಲ್ ನ ಮುಖ್ಯೋಪಾಧ್ಯಾಯಿನಿ ರಾಧಿಕಾ ನಾಯ್ಕ ತಿಳಿಸಿದರು.
ಕೃಷಿ ಪ್ರಧಾನ ದೇಶದಲ್ಲಿ ನಗರ ಪ್ರದೇಶದ ಜನರು ಮಕ್ಕಳು ಕೃಷಿ ಚಟುವಣಿಕೆಯ ಅರಿವಿಲ್ಲದೆ ಬದುಕುತ್ತಿರುವ ಸನ್ನಿವೇಶದಲ್ಲಿ ಕೃಷಿಯನ್ನು ಒಂದು ಅಭ್ಯಾಸ ವಿಷಯದ ರೂಪದಲ್ಲಿ ಪ್ರಯೋಗಿಕವಾಗಿ ಬಾವಿ ಯುವಕರಿಗೆ ತಿಳಿಸುತ್ತಿರುವದು ಸಂತಸದ ವಿಷಯವಾಗಿದೆ.
ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಶಿಕ್ಷಣದ ಜೊತೆ ಕೃಷಿಯನ್ನು ಒಂದು ವಿಷಯದಂತೆ ನಗರ ಪ್ರದೇಶದ ಮಕ್ಕಳಿಗೆ ಪ್ರಾಯೋಗಿಕವಾಗಿ ವಿದ್ಯಾಬ್ಯಾಸ ಮಾಡಲು ಎಲ್ಲ ಶಾಲಾ ಕಾಲೇಜುಗಳಲ್ಲಿ ಒಂದು ಪಠ್ಯಕ್ರಮದ ರೀತಿಯಲ್ಲಿ ಅಳವಡಿಸಬೇಕು. ಆಧುನಿಕ ಸಮಾಜದಲ್ಲಿ ಎಲ್ಲ ರಂಗದಲ್ಲಿಯು ಮುಂಚುಣಿಯಲ್ಲಿ ಬೆಳೆಯುತ್ತಿದೆ. ಕೃಷಿ ಪ್ರಧಾನ ದೇಶ ಕೃಷಿಯಲ್ಲಿ ಇನ್ನು ಉತ್ತಮ ಬೆಳವಣಿಗೆ ಹೊಂದಬೇಕು.