ಬೆಳಗಾವಿಯಲ್ಲಿ ಜರುಗಿದ ಅದ್ದೂರಿ ಅಂಬಿಗರ ಚೌಡಯ್ಯ ಜಯಂತಿ

ಬೆಳಗಾವಿಯಲ್ಲಿ ಇಂದು ಅದ್ದೂರಿ ಅಂಬಿಗರ ಚೌಡಯ್ಯನವರ ಜಯಂತಿಯ ಮೆರವಣಿಗೆ ನಡೆದಿದ್ದು ಅಪಾರ ಜನಸ್ತೋಮ ಪಾಲ್ಗೊಂಡಿದ್ದರು.

promotions

ಲೋಕಲವಿವ ನ್ಯೂಸ್ ವರದಿಗಾರರಾಗಲು 8310635736 ಕರೆಮಾಡಿ

promotions

ಬೆಳಗಾವಿ ಮಹಾನಗರದ ಚೆನ್ನಮ್ಮ ವೃತ್ತದಲ್ಲಿ ಕಿತ್ತೂರ ರಾಣಿ ಚೆನ್ನಮ್ಮರವರಿಗೆ ನಮನ ಸಲ್ಲಿಸಿದ ಮೆರವಣಿಗೆ ಅದ್ದೂರಿ ಜಯಂತಿಗೆ ಶಾಕ್ಷಿಯಾಗಿದೆ. 

promotions

೧೨ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವ. ತನ್ನ ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ.

ಲೋಕಲವಿವ ನ್ಯೂಸನಲ್ಲಿ ಜಾಹಿರಾತುಗಳಿಗಾಗಿ 8904752259 ಕರೆಮಾಡಿ

ಉಳಿದ ವಚನಕಾರರ ವಚನಗಳಲ್ಲಿರುವಂತೆ ಇವರಲ್ಲಿಯೂ ಶಿವಾನುಭವಪರವಾದ ವಚನಗಳಿದ್ದರೂ ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬೇಕು.

Read More Articles