ಶಿನೋಳಿಯಲ್ಲಿ ಜೂಜಾಟ ಅಡ್ಡೆ ಮೇಲೆ ದಾಳಿ, ೫೮ ಜನ ಜೂಜುಗಾರರ ಬಂಧನ
ಬೆಳಗಾವಿ: ಚಂದಗಡ ತಾಲ್ಲೂಕಿನ ದೇವರವಾಡಿ ಗ್ರಾಮದಲ್ಲಿ ಜೂಜಾಟ ಅಡ್ಡೆ ಮೇಲೆ ಶಕ್ರವಾರ (ಅ. 25) ಸಂಜೆ ಸ್ಥಳೀಯ ಅಪರಾಧ ಶಾಖೆ (LCB) ಕೊಲ್ಹಾಪುರ ಪೊಲೀಸರು ದಾಳಿ ನಡೆಸಿ, ೫೮ ಜನ ಜೂಜುಗಾರರನ್ನು ಬಂಧಿಸಿದ್ದಾರೆ.
ಒಟ್ಟು ₹6.78 ಲಕ್ಷ ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಚಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.