ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಬೈಲಹೊಂಗಲದ ಪ್ರತಿಭೆ
- shivaraj bandigi
- 15 Jan 2024 , 2:17 AM
- Belagavi
- 633
ಬೈಲಹೊಂಗಲ : ಪಟ್ಟಣದ 7 ನೇಯ ತರಗತಿ ವಿದ್ಯಾರ್ಥಿ ಆರ್ಯನ ಸೊಗಲ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ಅಬಾಕಸ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವದರ ಮೂಲಕ ನಾಡಿಗೆ ಕೀರ್ತಿ ತಂದಿದ್ದಾನೆ.
ರಾಜಧಾನಿ ಬೆಂಗಳೂರುನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸತತವಾಗಿ ಎರಡು ಬಾರಿ ಚಾಂಪಿಯನ್ ಆಗಿ ಚೆನೈನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ಹಾಗೂ ಆನಲೈನ ಮೂಲಕ ನಡೆಸುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಬೈಲಹೊಂಗಲ ನಾಡಿನ ಕೀರ್ತಿ ಪತಾಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಾಡುವಂತೆ ಮಾಡಿದ್ದಾನೆ.
ಅಬಾಕಸನ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದ ಆರ್ಯನ ಪಟ್ಟಣದ ರಾಜು ಸೊಗಲ ಪುತ್ರನಾಗಿದ್ದಾನೆ. ಬೆಳಗಾವಿಯ ಜ್ಞಾನ ಪ್ರಭೋದನ ಮಂದಿರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಯನನಿಗೆ ಬ್ಯಾಡ್ಮಿಂಟನ್, ಕ್ರಿಕೇಟ್, ಪುಟ್ಬಾಲ ಅಚ್ಚುಮೆಚ್ಚಿನ ಆಟಗಳು. ಶಾಲಾ ಹಂತದಲ್ಲಿ ವಿವಿದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಕೂಡಾ ಪಡೆದುಕೊಂಡಿದ್ದಾನೆ.
ಈತನ ಸಾಧನೆ ಹೀಗೆ ಮುಂದೆವರೆದು ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದು ನಾಡಿನ ಹೆಸರನ್ನು ಗಟ್ಟಿಗೊಳಿಸಲಿ...
ವರದಿ : ರವಿಕಿರಣ್ ಯಾತಗೇರಿ