ಬೆಳಗಾವಿ ಹೊಸ ಪ್ರತಿಭೆಗಳ ವಿಭಿನ್ನ ಪ್ರಯತ್ನ: ಜಗವೇ ನೀನು ಮರು ಸೃಷ್ಟಿ ಹಾಡು ಯಶಸ್ವಿ

ಬೆಳಗಾವಿ :ಉತ್ತರ ಕರ್ನಾಟಕದ ಬೆಳಗಾವಿಯ ಹುಡುಗರು adi Nayak films YouTube channel ಪ್ರಾರಂಭಿಸಿ "ಜಗವೇ ನೀನು" ಚಿತ್ರಗೀತೆ ಮರು ಚಿತ್ರಿಸಿ ಹೊಸ ಪ್ರಯತ್ನಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.

Your Image Ad

ಪ್ರಪಂಚದಾದ್ಯಂತ ಸಿನಿಲೋಕ ಬಹಳ ವೇಗದಿಂದ ಬೆಳೆಯುತ್ತಿರುವ ದೊಡ್ಡ ಮಾಧ್ಯಮ. ಭಾರತ ಚಿತ್ರರಂಗದ ಬೆಳವಣಿಗೆಯಲ್ಲಿ ಕನ್ನಡ ಚಲನಚಿತ್ರಗಳ ಪಾತ್ರ ಬಹಳಷ್ಟಿದೆ. ಕನ್ನಡ ಚಲನಚಿತ್ರಗಳ ಮೂಲಕ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕರು ನಟರು ತಮ್ಮ ಛಾಪು ಮಾಡಿಸಿ ಹೆಸರುವಾಸಿಯಾಗಿದ್ದಾರೆ.

Your Image Ad

ಆದರೆ ಕನ್ನಡ ಚಲನಚಿತ್ರಗಳಲ್ಲಿ ನಟನೆಗೆ ಬಹುಪಾಲು ದಕ್ಷಿಣ ಕರ್ನಾಟಕದ ಭಾಗದವರದ್ದೇ ಮೇಲುಗೈ. ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಭಾಗದಿಂದ ಅನೇಕ ಕಲಾವಿದರು ಬೆಳಕಿಗೆ ಬಂದಿದ್ದಾರೆ ಆದರೆ ಬೆಳಗಾವಿ ಭಾಗದ ಪ್ರತಿಭೆಗಳು ಬೆಳೆದಿದ್ದು ಮಾತ್ರ ಅಷ್ಟಕಷ್ಟೇ ಎಂಬುವದು ವಿಪರ್ಯಾಸ.

Your Image Ad

ಟಿಕ್ ಟಾಕ್, ರೀಲ್ಸ್, ಸಾಮಾಜಿಕ ಜಾಲತಾಣಗಳು ಬಂದಮೇಲೆ ಉತ್ತರ ಕರ್ನಾಟಕ ಭಾಗದ ಕೆಲವು ಹೆಸರುವಾಸಿಯಾಗಿದ್ದಾರೆ ಆದರೆ ಚಲನಚಿತ್ರಗಳಲ್ಲಿ ನಟನೆಗೆ ಅವಕಾಶ ಪಡೆಯಲು ಸಾಧ್ಯವಾಗದೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸೀಮಿತವಾಗಿದ್ದಾರೆ ಹಾಗಾಗಿ ನಮ್ಮವರನ್ನು ನಾವು ಬೆಳೆಸಬೇಕಿದೆ.

Your Image Ad

ಈ ವಿಷಯಗಳನ್ನು ಹೊರತುಪಡಿಸಿ ನೋಡುವುದಾದರೆ ಆದಿಶೇಷ ಎಂಬ ಯುವಕ ಯಾವುದೇ ನಟ, ನಟಿಯರ ಬೆಂಬಲ, ನಟನೆಯ ತಯಾರಿಯಿಲ್ಲದೆ ಸ್ವಂತ ಶ್ರಮದಿಂದ ತಂಡ ಕಟ್ಟಿಕೊಂಡು "ಜಗವೇ ನೀನು" ಲವ್ 360 ಚಲನಚಿತ್ರದ ಗೀತೆಯನ್ನು ಬಳಸಿಕೊಂಡು ಅದ್ಭುತವಾಗಿ ಚಿತ್ರಿಸಿ, ಯಾವುದೇ ರಾಜ್ಯಮಟ್ಟದ ಚಲನಚಿತ್ರ ದೃಶ್ಯಗಳಿಗೆ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಚಿತ್ರಿಸಿ ಸೈ ಎನಿಸಿಕೊಂಡಿದ್ದಾರೆ. ಹೀರೋಯಿನ್ ಪಾತ್ರವನ್ನು ನಿಖಿತಾ ಮಾಳಿ ನಿರ್ವಹಿಸಿದ್ದಾರೆ.

ಇನ್ನೊಂದು ವಿಶೇಷವೆಂದರೆ (ಅ.28) ಶುಕ್ರವಾರ ಸಂಜೆ 4.30 ಗಂಟೆಗೆ ಹಾಡು ಬಿಡುಗಡೆ ಮಾಡಲಾಗಿದ್ದು, ಬಿಡುಗಡೆಯ ಮುನ್ನವೇ ಪ್ರಖ್ಯಾತ ಕಲಾವಿದರು, ಹಾಸ್ಯ ನಟರು ಹಾಡಿಗೆ ಶುಭ ಹಾರೈಸಿದ್ದು ಒಳ್ಳೆಯ ಬೆಳವಣಿಗೆಯಾಗಿದೆ.

ಇಂತಹ ಕಲಾವಿದರನ್ನು ನಾವೆಲ್ಲರೂ ಬೆಳೆಸಬೇಕಿದೆ adi Nayak films ಯೂಟ್ಯೂಬ್ ಚಾನಲ್ ಮೂಲಕ ಹಾಡು ಬಿಡುಗಡೆಯಾಗಿದೆ. ಕೇವಲ ಒಂದು ಗಂಟೆಯಲ್ಲಿ 2 ಸಾವಿರಕ್ಕೂ ಅಧಿಕ ವಿವ್ಸ್ ಪಡೆದುಕೊಂಡು ಮುನ್ನುಗ್ಗುತಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಹುಡುಗ ಆದಿಶೇಷನ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ಹೇಳಬಹುದು.

ಹಾಡಿನಲ್ಲಿ ಸುಂದರ ಪ್ರೇಮ ಕಥೆ ಅದ್ಭುತವಾಗಿ ಮೂಡಿ ಬಂದಿದ್ದು, ಮನಸಳೆಯುವಂತಿದೆ. ಬಹುಪಾಲು ಬೆಳಗಾವಿಯಲ್ಲಿ ಚಿತ್ರೀಕರಣಗೊಂಡಿದ್ದು, ಅಲ್ಲಲ್ಲಿ ಪರಿಸರ ಸ್ನೇಹಿ ದೃಶ್ಯಗಳನ್ನು ಕಾಣಬಹುದು. ಇದೇ ರೀತಿಯಲ್ಲಿ ಉತ್ತರ ಕರ್ನಾಟಕದ ಯುವಕರು ಬೆಳೆಯಲಿ. ವಿಶೇಷವಾಗಿ ಬೆಳಗಾವಿ ಹುಡುಗರು ಬೆಳೆಯಲಿ ಎಂದು ಹೇಳುತ್ತಾ ಮತ್ತೊಮ್ಮೆ ನಮ್ಮವರು ಬೆಳೆಯಬೇಕು ಎಂಬುದನ್ನು ನೆನಪಿಸುತ್ತೇನೆ.

Read More Articles