ಭರತೇಶ ಶಿಕ್ಷಣ ಟ್ರಸ್ಟ್ ಬೆಳಗಾವಿ, ಸ್ಟಾರ್ಟಪ್ ಅಸೋಸಿಯೇಷನ್ ನಡೆವೆ ಎಂಒಯು ಒಪ್ಪಂದಕ್ಕೆ ಸಹಿ
- shivaraj B
- 5 Aug 2024 , 2:29 PM
- Belagavi
- 483
ಬೆಳಗಾವಿ : ಇಲ್ಲಿನ ಭರತೇಶ್ ಶಿಕ್ಷಣ ಸಂಸ್ಥೆಯು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ಬೆಳಗಾವಿಯಲ್ಲಿ ಸ್ಟಾರ್ಟಪ್‌ಗಳು ಹೊಸ ಆವಿಷ್ಕಾರಗಳನ್ನು ತಂದು, ಉದ್ಯೋಗವನ್ನು ಸೃಷ್ಟಿಸಿ, ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತವೆ. ಅವು ಹೊಸ ಆಲೋಚನೆಗಳು ಮತ್ತು ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತವೆ. ಭರತೇಶ ಶಿಕ್ಷಣ ಟ್ರಸ್ಟ್ ಮತ್ತು ಬೆಳಗಾವಿ ಸ್ಟಾರ್ಟಪ್ ಅಸೋಸಿಯೇಷನ್ (ಬಿಎಸ್ಎ) ಸಹಕಾರದೊಂದಿಗೆ ಬೆಳಗಾವಿಯು ಕರ್ನಾಟಕದ ಪ್ರಮುಖ ಸ್ಟಾರ್ಟಪ್ ಕೇಂದ್ರವಾಗಿ ರೂಪುಗೊಳ್ಳಲಿದೆ.
ಭರತೇಶ ಶಿಕ್ಷಣ ಟ್ರಸ್ಟ್ ಮತ್ತು ಬೆಳಗಾವಿ ಸ್ಟಾರ್ಟಪ್ ಅಸೋಸಿಯೇಷನ್ (ಬಿಎಸ್ಎ) ಎಂಒಯು ಸಹಿ ಮಾಡಿಕೊಂಡಿದ್ದು, ಈ ಪಾಲುದಾರಿಕೆ ಬೆಳಗಾವಿಯಲ್ಲಿ ಸ್ಟಾರ್ಟಪ್‌ಗಳ ಬೆಳವಣಿಗೆಗೆ ಪೂರಕವಾಗಲಿದೆ, ಇದರಿಂದ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಹೊಸ ಆವಿಷ್ಕಾರಗಳೊಂದಿಗೆ ಬೆಳೆದುಕೊಳ್ಳಲು ಸಾಧ್ಯವಾಗುತ್ತದೆ.
ಭರತೇಶ ತಂತ್ರಜ್ಞಾನ ಹತ್ತು ಕಂಪನಿಗಳಿಗೆ ಸ್ಥಳ ನೀಡಲಿದೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯಕ ಸ್ಥಳಗಳನ್ನು ಒದಗಿಸುತ್ತದೆ. ಭರತೇಶ ಸಾರಿಗೆ, ಇಂಟರ್ನೆಟ್, ಇಂಕ್ಯೂಬೇಷನ್ ಸೌಲಭ್ಯಗಳು ಮತ್ತು ಸ್ಟಾರ್ಟಪ್‌ಗಳಿಗೆ ಯಾವುದೇ ಸಮಯದಲ್ಲಿ ಪ್ರವೇಶವನ್ನು ಒದಗಿಸುತ್ತಿದೆ.
ನಾಯಕತ್ವ ಮತ್ತು ದೃಷ್ಟಿ
ಭರತೇಶ ಶಿಕ್ಷಣ ಟ್ರಸ್ಟ್ ಸಕ್ರಟರಿ, "ಭರತೇಶ ವಿದ್ಯಾರ್ಥಿ ಮತ್ತು ಉದ್ಯಮಗಳನ್ನು ಬೆಂಬಲಿಸುತ್ತಿದೆ, ಮತ್ತು ಈ ಹೊಸ ಯುಗದೊಂದಿಗೆ ಹೊಸ ಅವಕಾಶಗಳತ್ತ ಹೆಜ್ಜೆಯಿಡುತ್ತಿದೆ ಎಂದು ಲೆಂಗಡೆ ಹೇಳಿದ್ದಾರೆ, ಇಂಕ್ಯೂಬೇಶನ್ ಕೇಂದ್ರವು ಉದ್ಯಮದ ಅಗತ್ಯಗಳು ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯಗಳ ನಡುವಿನ ಅಂತರವನ್ನು ಪೂರೈಸುವುದು. ಪ್ರಿನ್ಸಿಪಾಲ್ ವೀಣಾ, "ಭರತೇಶ ಬೆಳಗಾವಿಯಲ್ಲಿ ಉದ್ಯಮಿ ಸಂಸ್ಕೃತಿಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ, ಇದರಿಂದಲೇ ಇತರ ಕಾಲೇಜುಗಳಿಂದ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ
ಈ ಒಪ್ಪಂದವು ಪ್ರಭಾವ ಮತ್ತು ಭವಿಷ್ಯದ ಗುರಿಗಳ ಮೇಲೆ ಪರಿಣಾನ ಬೀರಲಿದ್ದು, ಈ ಯೋಜನೆ ಬೆಳಗಾವಿ ಮತ್ತು ಕರ್ನಾಟಕದ ಅತಿದೊಡ್ಡದಾಗಿದೆ, ಇದು ಕಾಲೇಜು ಮತ್ತು ಉದ್ಯಮಿಗಳಿಗೆ ಸಹಾಯವಾಗುತ್ತದೆ. ಬಿಎಸ್ಎ ಸಕ್ರಟರಿ ಹರೀಶ್ ಟೊಪ್ಪನವರ ಭರತೇಶ ಸಂಸ್ಥೆಗೆ ಅವಕಾಶಕ್ಕಾಗಿ ಧನ್ಯವಾದ ತಿಳಿಸಿದರು. ಬಿಎಸ್ಎ ಬೆಳಗಾವಿಯಲ್ಲಿ ಸ್ಟಾರ್ಟಪ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಮತ್ತು ಕಂಪನಿಗಳಿಗೆ ಉತ್ತಮ ವಾತಾವರಣವನ್ನು ನಿರ್ಮಿಸಲು ಶಪಥ ಮಾಡಿದೆ.