ಸಿಎ, ಬಿಕಾಂ ಪರೀಕ್ಷೆ ಒಂದೇ ಸಮಯಕ್ಕೆ : ಗೊಂದಲ

ಬೆಂಗಳೂರು: ಜ.16ಕ್ಕೆ ಸಿಎ ಪರೀಕ್ಷೆ ಇದ್ದು, ಇದೇ ಸಮಯಕ್ಕೆ ಬೆಂಗಳೂರು ವಿವಿ ಬಿಕಾಂ ಪರೀಕ್ಷೆ ಇಟ್ಟಿದೆ. ಇದರಿಂದ ವಿದ್ಯಾರ್ಥಿಗಳು ಸಿಎ ಪರೀಕ್ಷೆ ಬರೆಯೋದೋ ಅಥವಾ ಬಿಕಾಂ ಪರೀಕ್ಷೆ ಬರೆಯೋದೋ ಎನ್ನುವ ಆತಂಕದಲ್ಲಿದ್ದಾರೆ. ಈ ಕುರಿತಂತೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

promotions

ನನ್ನ ಮನೆಗೆ ಇಂದು ಸಂಜೆ ಓರ್ವ ಫಸ್ಟ್ ಬಿಕಾಂ ವಿದ್ಯಾರ್ಥಿನಿ ತನ್ನ ತಂದೆಯ ಜೊತೆ ಬಂದಿದ್ದರು. ಗುರುವಾರ ಬೆಳಗ್ಗೆ  9.30 ಗಂಟೆಗೆ ಅವರಿಗೆ ಮೊದಲನೇ ಬಿಕಾಂ ನ ಪರೀಕ್ಷೆ ನಿಗದಿಯಾಗಿತ್ತು. ಆಕೆ ಸಿಎ ಶಿಕ್ಷಣವನ್ನು ಸಹ ಪಡೆಯುತ್ತಿರುವುದರಿಂದ, ಸಿಎ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದೆ. 

promotions

ಈ ನಡುವೆ ಗುರುವಾರ ಬೆಳಗ್ಗೆ ಒಂಬತ್ತು ಗಂಟೆಗೆ ನಿಗದಿಯಾಗಿದ್ದ ಪರೀಕ್ಷೆಯನ್ನು ಗುರುವಾರ ಮಧ್ಯಾಹ್ನ 2.00 ಗಂಟೆಗೆ (ಧಿಡೀರನೆ ಯಾವುದೇ ಕಾರಣವನ್ನೂ ನೀಡದೆ) ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.

Read More Articles