ಅಂಬಿಗರ ಚೌಡಯ್ಯ ಜಯಂತಿಯನ್ನು ಜನಜಾಗ್ರತಿ ಸಮಾವೇಶವನ್ನಾಗಿ ಆಚರಿಸಲು ಕರೆ
- krishna shinde
- 1 Feb 2024 , 8:52 AM
- Belagavi
- 475
ಬೆಳಗಾವಿ : ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುಲಬಾಂಧವರ ಸಹಯೋಗದೊಂದಿಗೆ. ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ.
ನಿಜಶರಣ ಅಂಬಿಗರ ಚೌಡಯ್ಯ ಅವರ 904 ನೇ ಜಯಂತಿ ಉತ್ಸವ ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಜಯಂತಿಯನ್ನು ಬ್ರಹತ್ ಜನಜಾಗ್ರತಿ ಸ್ವಾಭಿಮಾನ ಸಮಾವೇಶವನ್ನಾಗಿ ಆಚರಿಸಲು ಕರೆ ನೀಡಲಾಗಿದೆ.
ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕೋಳಿ - ಬೆಸ್ತ ಸಮಾಜ ಬಾಂಧವರಿದ್ದರೂ ಅಸಂಘಟಿತವಾಗಿದ್ದಾರೆ.
ಪೆಬ್ರವರಿ 4 ಕ್ಕೆ ಏಕೆ ಈ ಜಯಂತಿ
ರಾಜ್ಯದಲ್ಲಿ ಜಿಲ್ಲೆಯಲ್ಲಿ ಬಹುತೇಕ ಕಡೆ ಜನೇವರಿ 21 ಜಯಂತಿಯನ್ನು ಆಚರಿಸಿದ್ದಾರೆ. ಸಂಘ ಮತ್ತು ಸಂಘಟನೆಯನ್ನು ಬಲಪಡಿಸಲು ಬೆಳಗಾವಿ ಜಿಲ್ಲಾ ಸಂಘದಿಂದ ಪೆಬ್ರವರಿ 4 ರಂದು ಆಚರಿಸಲು ನಿರ್ಧರಿಸಲಾಗಿದೆ.
ಈ ದಿನದ ಮಹತ್ವ: ಛತ್ರಪತಿ ಶಿವಾಜಿ ಮಹಾರಾಜರ ಆತ್ಮೀಯ ವೀರ ಧೀರ ಕೋಳಿ ಸಮಾಜದ ಹೆಮ್ಮಯ ಪುತ್ರ ಶಿವಾಜಿ ಮಹಾರಾಜರ ಸೇನೆಯ ಸಿಂಹ ಎಂದೆ ಗುರ್ತಿಸಿಕೊಂಡ ತಾನಾಜಿ ಮಾಲಸೂರೆ ಅವರ ಪುಣ್ಯ ದಿನ ಫೆಬ್ರವರಿ 4. ಮೊಘಲರ ಸೈನ್ಯದೊಂದಿಗೆ ಹೋರಾಡಿ ತಾನಾಜಿಯವರು ಮಡಿದ ದಿನ.
ಜಯಂತಿಯ ಪ್ರಮೂಖ ಕಾರ್ಯಕ್ರಮಗಳು
ಬೆಳಿಗ್ಗೆ 8 ಗಂಟೆಗೆ ಎರಡು ಸಾವಿರ ಶರಣೆಯರಿಂದ ಕುಂಭ ಮೇಳ.
ಕಿಲ್ಲಾ ಕೆರೆಯಿಂದ ಸರ್ದಾರ್ ಮೈದಾನದ ವರೆಗೆ ಬ್ರಹತ ಮೆರವಣಿಗೆ.
ಮೆರವಣಿಗೆಯಲ್ಲಿ ಭಾಗವಹಿಸುವ ಕಲಾ ತಂಡಗಳು.
ಡೊಳ್ಳು ಜಾಂಜಪದಕ , ಕಂಸಾಳೆ, ಆನೆ ,ಒಂಟೆ ಕುದುರೆ ವಾದ್ಯ ಮೇಳ.
ಉತ್ತರ ಕರ್ನಾಟಕ 35 ಸಾವಿರ ಜನ ಸೇರುವ ನಿರೀಕ್ಷೆ. ಎಲ್ಲರಿಗೂ ಊಟದ ವ್ಯವಸ್ಥೆ.
ಸರ್ದಾರ್ ಮೈದಾನದಲ್ಲಿ ಕಾರ್ಯಕ್ರಮ, ಸಿಪಿಎಡ್ ಮೈದಾನದಲ್ಲಿ ವಾಹನ ನಿಲುಗಡೆ.