ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದ ಚನ್ನರಾಜ ಹಟ್ಟಿಹೊಳಿ

ಚಿಕ್ಕೋಡಿ:  ಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ ತಾಲೂಕಿನ ನಾಗರಮುನ್ನೋಳ್ಳಿಯ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಸಿದ್ದೇಶ್ವರ ಸ್ವಾಮಿಯ ದರ್ಶನ, ಆಶೀರ್ವಾದ ಪಡೆದು, ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದ್ದಾರೆ. 
ಈ ಸಮಯದಲ್ಲಿ ದೇಶಿ ಕ್ರೀಡೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ದಿಶೆಯಲ್ಲಿ ಹಾಗೂ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಧನ ಸಹಾಯವನ್ನು ಸಹ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸಿದ್ದಪ್ಪ ಮರ್ಯಾಯಿ, ಶಿವಪುತ್ರ ಮನಗೂಳಿ, ಗುಲಾಬ ಜಮಾದಾರ, ಬೀರಪ್ಪ ನಾಗರಾಳೆ, ಶಂಕರಗೌಡ ಪಾಟೀಲ, ರಾಜಕುಮಾರ ಕೋಟಗಿ, ಗಣೇಶ ಮೋಹಿತೆ, ರಿಷಭ್ ಪಾಟೀಲ ಹಾಗೂ ದೇವಸ್ಥಾನದ ಟ್ರಸ್ಟ್ ಕಮೀಟಿಯವರು ಉಪಸ್ಥಿತರಿದ್ದರು.

promotions

promotions

Read More Articles