
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶತಮಾನೋತ್ಸವ ಬೃಹತ್ ಸಮಾವೇಶ: ರಾಯಬಾಗದಲ್ಲಿ ಪೂರ್ವಭಾವಿ ಸಭೆ
ರಾಯಬಾಗ:27/12/2024, ರಾಯಬಾಗದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಕಾಂಗ್ರೆಸ್ ಶತಮಾನೋತ್ಸವ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ ನಡೆಯಿತು. ಈ ಸಭೆ ಮಾನ್ಯ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಆದೇಶದ ಮೇರೆಗೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ 2023ರ ಕಾಂಗ್ರೆಸ್ ಅಭ್ಯರ್ಥಿಯಾದ ಮಹಾವೀರ ಮೋಹಿತೆ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಹಾವೀರ್ ಮೋಹಿತೆ, ಈ ಶತಮಾನೋತ್ಸವ ಸಮಾವೇಶವು ಐತಿಹಾಸಿಕ ಆಗಬೇಕಾಗಿದೆ. ಪ್ರತಿ ಬೂತ್ ಮಟ್ಟದಿಂದ ಹೆಚ್ಚಿನ ಜನರನ್ನು ಕರೆತರಲು ಎಲ್ಲಾ ಮುಖಂಡರು ಮುಂದಾಗಬೇಕು ಎಂದು ಮುಖಂಡರಿಗೆ ಮನವಿ ಮಾಡಿದರು.

ಸಮಾವೇಶದಲ್ಲಿ ಉಪಸ್ಥಿತರು:ಈ ಕಾರ್ಯಕ್ರಮದಲ್ಲಿ AICC ರಾಯಬಾಗ ಉಸ್ತುವಾರಿ ನೀಗಪ್ಪ ಕುಡೋಲಿ, ಕಾಂಗ್ರೆಸ್ ಟೌನ್ ಅಧ್ಯಕ್ಷ ಹಾಜಿ ಮುಲ್ಲಾ, ಕೆಪಿಸಿಸಿ ಸದಸ್ಯ ದಿಲೀಪ್ ಜಮಾದಾರ, ಹಾಗೂ ಪ್ರಮುಖ ಮುಖಂಡರುಗಳಾದ ತಮ್ಮಾಣಿ ನೀಗನೂರೆ, ಅರ್ಜುನ ಬಂಡಗರ, ಬಾಹುಸಾಬ ಪಾಟೀಲ, ಹರೀಶ ಕುಲಗೂಡೆ, ಶ್ರವಣಕುಮಾರ ಕಾಂಬಳೆ, ಶ್ರೀಮಂತ ಸಲಗರೆ, ಸಚೀನ ಮುಂಜೆ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಈ ಶತಮಾನೋತ್ಸವ ಸಮಾವೇಶದ ಯಶಸ್ಸಿಗಾಗಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಸಂಪೂರ್ಣ ಶಕ್ತಿಯನ್ನು ನಿರ್ವಹಿಸಲು ಸಿದ್ಧತೆ ಮಾಡುತ್ತಿದ್ದಾರೆ.