ಕರ್ನಾಟಕ ಸೇರಿ 8ರಾಜ್ಯಗಳಲ್ಲಿ ಕೋವಿಡ-19 ತಾಂಡವ: ವಾರ್ನ ಮಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ

COVID19 ಸಾಂಕ್ರಾಮಿಕ ಜಾಗತಿಕ ಪ್ರಕರಣಗಳಲ್ಲಿ ಸುಮಾರು 1% ಭಾರತದಲ್ಲಿ ವರದಿಯಾಗಿವೆ ಮತ್ತು ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 7,600 ಆಗಿದೆ.  ಪ್ರತಿದಿನ ಸರಾಸರಿ 966 ಪ್ರಕರಣಗಳು ವರದಿಯಾಗುತ್ತಿವೆ.  ಫೆಬ್ರವರಿ 2ನೇ ವಾರದಲ್ಲಿ ಪ್ರತಿದಿನ ಸರಾಸರಿ 108 ಪ್ರಕರಣಗಳು ವರದಿಯಾಗುತ್ತಿದ್ದು, ಇದೀಗ 966ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

Your Image Ad

ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿರುವ ಎಂಟು ರಾಜ್ಯಗಳೆಂದರೆ - ಮಹಾರಾಷ್ಟ್ರ, ಗುಜರಾತ್, ಕೇರಳ, ಕರ್ನಾಟಕ, ತಮಿಳುನಾಡು, ದೆಹಲಿ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ.  

Your Image Ad

ಮಾರ್ಚ್ 16 ರಂದು ಈ ರಾಜ್ಯಗಳಿಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದೇನೆ ಎಂದು ಭೂಷಣ ತಿಳಿಸಿದ್ದಾರೆ.ಭಾರತದಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ಎಲ್ಲಾ ರೂಪಾಂತರಗಳು ಓಮಿಕ್ರಾನ್‌ನ ಉಪ-ರೂಪಾಂತರಗಳಾಗಿವೆ ಎಂದು ಹೇಳಿದ್ದಾರೆ.

Your Image Ad

Read More Articles